ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಸದನ ಸಮಿತಿ ರಚನೆ : ವಿಧಾನಸಭಾಧ್ಯಕ್ಷ ಯು.ಟಿ ಖಾದರ್

Karnataka Crowd Control (Management of Crowds at Events and Gathering Places) Bill, 2025 -House Committee Formation- U.T. Khader

Aug 21, 2025 - 23:47
Aug 22, 2025 - 01:29
 0
ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಸದನ ಸಮಿತಿ ರಚನೆ :  ವಿಧಾನಸಭಾಧ್ಯಕ್ಷ ಯು.ಟಿ ಖಾದರ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ಬೆಂಗಳೂರು : ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ವಿಧೇಯಕ, 2025  ಅನ್ನು ಪರ್ಯಾಲೋಚಿಸಿ ಅಂಗೀಕರಿಸಲು ಸದನ ಸಮಿತಿ ರಚಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ (U T KHADAR) ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ವಿಧೇಯಕ, 2025  -ನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು.

ವಿಧೇಯಕವು  ಕಾರ್ಯಕ್ರಮಗಳು ಮತ್ತು ಸಮಾರಂಭದಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಮತ್ತು ಜನ ಗುಂಪುಗೂಡುವುದನ್ನು ನಿರ್ವಹಿಸುವುದು, ಕಾನೂನು ಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂದಿಸುವುದು ಎಂದು ವಿಧೇಯಕದ ಮೂಲ ಉದ್ದೇಶವನ್ನು ಗೃಹಸಚಿವ ಜಿ. ಪರಮೇಶ್ವರ್ ಸದನದಲ್ಲಿ ಪ್ರಸ್ತಾಪಿಸಿದರು.

ಜನಸಂದಣಿ ನಿರ್ವಹಣೆ ಎಂಬುದು ಕಾರ್ಯಕ್ರಮ ಯೋಜನೆ, ಕಾರ್ಯಕ್ರಮದ ಪೂರ್ವದಲ್ಲಿ ಕಾರ್ಯಕ್ರಮ ಆಯೋಜಕರೊಂದಿಗೆ ಸಂಪರ್ಕ ಅನ್ವಯವಾಗುವಲ್ಲಿ ಅನುಮತಿಗಳ ನೀಡುವಿಕೆ, ಮಾಹಿತಿ ಸಂಗ್ರಹಣೆ ಮತ್ತು ಇತರೆ ವಿಧಾನಗಳ ಮೂಲಕ ಕಾನೂನು ಬದ್ಧ ಸ್ಥಿತಿಗತಿಯನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಕಾರ್ಯಕ್ರಮದ ಮೊದಲು ನಡೆಯುವ ವೇಳೆ ಮತ್ತು ನಂತರದಲ್ಲಿನ ಕಾನೂನುಬದ್ಧ ಗುಂಪುಸೇರುವಿಕೆಯನ್ನು ನಿರ್ವಹಿಸಲು ಈ ವಿಧೇಯಕವನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ವಿಧೇಯಕವು ಖಾಸಗಿ ಆವರಣಗಳೊಳಗೆ ಆಚರಿಸುವ ಅಥವಾ ನಡೆಸುವ ಕೌಟುಂಬಿಕ ಸಮಾರಂಭಗಳು ಅಥವಾ ಕಾರ್ಯಕ್ರಮಗಳಾದ ಮದುವೆ ಮುಂತಾದವುಗಳಿಗೆ ಅನ್ವಯವಾಗುವುದಿಲ್ಲ ಎಂದು ವಿಧೇಯಕದ ಇತರೆ ನಿಯಮಗಳನ್ನು ಸದನದಲ್ಲಿ ವಿವರಿಸಿದರು.

ವಿಧೇಯಕದ ನಿಯಮಗಳನ್ನು ಆಲಿಸಿದ ವಿಧಾನಸಭೆಯ ಸದಸ್ಯರು, ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸುಧೀರ್ಘವಾಗಿ ಸದರಿ ವಿಧೇಯಕದ ಕುರಿತು ಚರ್ಚಿಸಿದರು. ವಿರೋಧ ಪಕ್ಷದ ನಾಯಕರು ಹಾಗೂ ವಿಧಾನಸಭೆಯ ಇತರೆ ಸದಸ್ಯರು ಇದೊಂದು ಗಂಭೀರವಾದ ವಿಧೇಯಕವಾಗಿದ್ದು ಇದನ್ನು ತ್ವರಿತವಾಗಿ ತೀರ್ಮಾನಿಸುವುದು ಸೂಕ್ತವಾಗಿರುವುದಿಲ್ಲ. ಸದನ ಸಮಿತಿಯನ್ನು ರಚಿಸಿ ಸಮಿತಿಯ ಮುಂದೆ ಮಂಡಿಸಿ ಚರ್ಚಿಸಿ ತೀರ್ಮಾನಿಸುವುದು ಉತ್ತಮವೆಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಗೃಹಸಚಿವ ಡಾ; ಜಿ.. ಪರಮೇಶ್ ಸದನ ಸಮಿತಿಯ ಮುಂದೆ ಸದರಿ ವಿಧೇಯಕವನ್ನು ಮಂಡಿಸಿ, ಪರ್ಯಾಲೋಚಿಸಿ ಅಂಗೀಕರಿಸಲು ಸದನ ಸಮಿತಿ ರಚನೆಗೆ ತಮ್ಮ ಸಹಮತಿ ನೀಡಿದರು. ವಿಧಾನಸಭೆಯ ಸಭಾದ್ಯಕ್ಷರು ಸದರಿ ಬಿಲ್‍ಗೆ ಸದನ ಸಮಿತಿಯನ್ನು ರಚಿಸಲು ತೀರ್ಮಾನಿಸಿ ವಿಧೇಯಕವನ್ನು ಸದನ ಸಮಿತಿಯ ಮುಂದೆ ಮಂಡಿಸಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.