ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ

Passage of bills in the Legislative Assembly

Aug 21, 2025 - 23:50
Aug 22, 2025 - 01:28
 0
ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಲಿಫ್ಟ್‍ಗಳ, ಎಸ್ಕ್‍ಲೇಟರ್‍ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‍ಗಳ (ತಿದ್ದುಪಡಿ) ವಿಧೇಯಕವನ್ನು ಇಂಧನ ಸಚಿವರು  ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
 
2025ನೇ ಸಾಲಿನ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಫ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕವನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ವಿಧಾನಸಭೆಯಲ್ಲಿ  ಅಂಗೀಕರಿಸಬೇಕೆಂದು ಕೋರಿದರು. ವಿಧಾನಸಭೆಯ ಸದಸ್ಯರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.  

2025ನೇ ಸಾಲಿನ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ವಿಧಾನಸಭೆಯಲ್ಲಿ  ಅಂಗೀಕರಿಸಬೇಕೆಂದು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.  

ಕರ್ನಾಟಕ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ತಿರಸ್ಕøತವಾದ ರೂಪದಲ್ಲಿರುವ 2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು  ಪುನರ್ ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಮುಖ್ಯಮಂತ್ರಿಗಳ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ಕೋರಿದರು.

ಮೇಲ್ಮನೆಯಲ್ಲಿ ಸದರಿ ವಿಧೇಯಕದ ಕುರಿತು ಚರ್ಚೆಯಾಗಿ ಕೆಲವೊಂದು ತಿದ್ದುಪಡಿಗಳೊಂದಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.  ವಿಧಾನಸಭೆಯ ಸದಸ್ಯರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
 
2025ನೇ ಸಾಲಿನ ಕರ್ನಾಟಕ ಸಾಂಪ್ರಾದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ದ ರಕ್ಷಣೆ) ವಿಧೇಯಕವನ್ನು ಪಶುಸಂಗೋಪನೆ ಮತ್ತು ರೇμÉ್ಮ ಸಚಿವರು    ವಿಧೇಯಕದ ಕುರಿತು ಸದನದಲ್ಲಿ ಪ್ರಸ್ತಾಪಿಸಿ ವಿಧೇಯಕದ ವಿವರಗಳನ್ನು ನೀಡಿದರು. 2024-25ರ ಆಯವ್ಯಯದಲ್ಲಿ ಸದರಿ ಪ್ರಸ್ತಾವನೆಯನ್ನು ಜಾರಿಗೊಳಿಸಲು ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ನೋಂದಣಿ ಮತ್ತು ಗುರುತಿಸುವಿಕೆಗಾಗಿ ಹಾಗೂ ಸಾಂಪ್ರದಾಯಿಕವಾಗಿ ಅಲೆಮಾರಿ ಕುರಿಗಾಹಿಗಳ ಪ್ರಯೋಜನಕ್ಕಾಗಿ ಸ್ಕೀಮುಗಳನ್ನು ಅನುμÁ್ಠನಗೊಳಿಸಲು ಕ್ಷೇಮಾಭಿವೃದ್ಧಿ ಮಂಡಲಿಯ ಮೂಲಕ ನಿರ್ವಹಿಸಬೇಕಾದ ನಿಧಿಯನ್ನು ಸ್ಥಾಪಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಶಾಸನವೊಂದನ್ನು ಅಧಿನಿಯಮಿತಿಗೊಳಿಸುವುದು ಅವಶ್ಯಕವೆಂದ ಪರಿಗಣಿಸಲಾಗಿದೆ. ಮುಂದುವರೆದು ಕ್ಷೇಮಾಭಿವೃದ್ಧಿ ನಿಧಿಗೆ ಹಣಕಾಸು ಒದಗಿಸಲು ಮಾರುಕಟ್ಟೆ ಶುಲ್ಕವನ್ನು ವಿಧಿಸುವುದು ಯುಕ್ತವೆಂದು ಪರಿಗಣಿಸಬೇಕಾಗಿದೆ. ಸದರಿ ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು.

ಸದರಿ ವಿಧೇಯಕ ಬಗ್ಗೆ ವಿಧಾನ ಸಭೆಯ ಸದಸ್ಯರು, ಶಾಸಕರು, ಸಚಿವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿರೋಧಪಕ್ಷದ ನಾಯಕ ಅಶೋಕ್ ರವರು ಸದರಿ ವಿಧೇಯಕವನ್ನು ಸ್ವಾಗತಿಸಿ  ಕುರಿಗಾಹಿಗಳಿಗೆ ಯಾವುದೇ ಮನೆಗಳು ಇರುವುದಿಲ್ಲ .  ಸ್ಕೀಮುಗಳನ್ನು  ರೂಪಿಸುವಾಗ ಒಂದು ಟೆಂಟ್ ಸೌಲಭ್ಯವನ್ನು ನೀಡುವುದನ್ನು ಸೇರ್ಪಡೆಗೊಳಿಸಬೇಕು ಹಾಗೂ ಕುರಿಗಾಹಿಗಳಲ್ಲಿ ಹೆಣ್ಣುಮಕ್ಕಳು ಇರುತ್ತಾರೆ. ಇವರು ಒಂದೂರಿನಿಂದ ಇನ್ನೊಂದು ಊರಿಗೆ ಅಲೆಮಾರಿಗಳಾಗಿ ಹೋಗುತ್ತಾರೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾದಾಗ ಸ್ಥಳೀಯ ಪೆÇಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡು ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ರೂಪಿಸುವುದು ಅವಶ್ಯಕವೆಂದರು.

ಟಿಬಿ ಜಯಚಂದ್ರ ಅವರು ಕುರಿಗಾಹಿಗಳಿಗೆ ವಿಧೇಯಕ ತಂದಿರುವುದು ಸ್ವಾಗತಾರ್ಹ. ಮುಖ್ಯವಾಗಿ ಕುರಿಗಳಿಗೆ ಲಸಿಕೆ ಮತ್ತು ಚಿಕಿತ್ಸೆ ಕಾಲಕಾಲಕ್ಕೆ ಕಡ್ಡಾಯವಾಗಿ ಸಿಗುವಂತೆ ಮಾಡಬೇಕು. ಕುರಿಗಾಹಿಗಳಿಗೆ ಪೆÇಲೀಸರಿಂದ ರಕ್ಷಣೆ ಒದಗಿಸಬೇಕು,  ಕುರಿಗಾಹಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಆರ್ಥಿಕ ದೃಷ್ಟಿಯಿಂದ ರೈತನಿಗೆ ಒತ್ತು ನೀಡುವ ಬಿಲ್ ಆಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಶಾಸಕ ಧೀರಜ್ ಮುನಿರಾಜು, ಸುರೇಶ್ ಗೌಡ, ಶೀಘ್ರವಾಗಿ ಮಂಡಳಿ ರಚಿಸಿ ಸದರಿ ಮಂಡಳಿಯ ಮುಖಾಂತರ ಕುರಿಗಾಹಿಗಳಿಗೆ ಸ್ಕೀಮುಗಳನ್ನು ಜಾರಿಗೊಳಿಸಿ ಕುರಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವಂತೆ ತಿಳಿಸಿದರು.  ಶಾಸಕರಾದ ಶಿವಲಿಂಗೇಗೌಡರು ಸದರಿ ವಿಧೇಯಕವನ್ನು ಸ್ವಾಗತಿಸಿ  ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ವಿರುದ್ಧದ ಅಪರಾಧಗಳ ಬಗ್ಗೆ ಪ್ರಸ್ತಾಪಿಸಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲದೇ ಯಾವುದೇ ಸಾರ್ವಜನಿಕ ಸ್ವತ್ತು.ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ (ಮೀಸಲು ಅರಣ್ಯವನ್ನು ಹೊರತುಪಡಿಸಿ) ಪ್ರವೇಶಿಸುವುದನ್ನು ನಿರಾಕರಿಸಿದ್ದಲ್ಲಿ ಅಂಥ ವ್ಯಕ್ತಿಯು ಒಂದು ವರ್ಷದ ಅವಧಿಯ ಕಾರಾವಾಸದಿಂದ ಮತ್ತು ಐವತ್ತು ಸಾವಿರ ರೂಪಾಯಿಗಳ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ಎಂಬುದಾಗಿ ಪ್ರಸ್ತಾಪಿಸಿದೆ.  ಕೆಲವೊಂದು ಕಡೆಗಳಲ್ಲಿ ಅರಣ್ಯ ಪಾಲಕರೇ ಕುರಿಗಾಹಿಗಳಿಗೆ ತೊಂದರೆ ಕೊಡುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬಿಲ್‍ನ್ನು ಸ್ವಾಗತಿಸಿ ಕೇವಲ ಕರ್ನಾಟಕವಲ್ಲದೇ ಹೊರ ರಾಜ್ಯಗಳಿಂದಲೂ ಕುರಿಗಾಹಿಗಳು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ.  ಅರಣ್ಯ ಪ್ರದೇಶಗಳಲ್ಲಿ ಕುರಿಗಾಹಿಗಳಿಗೆ ನಿμÉೀಧ ಹೇರಲಾಗಿದೆ. ಕುರಿಗಾಹಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪಾಲಕರಿಗೆ ಕುರಿಗಾಹಿಗಳಿಗೆ ಯಾವುದೇ ತೊಂದರೆ ಕೊಡಬಾರದೆಂದು ಸೂಚನೆ ನೀಡಲಾಗಿದೆ ಹಾಗೂ ಅರಣ್ಯವಲ್ಲದ ಪ್ರಧೇಶಗಳಿಗೆ ಕುರಿಗಾಹಿಗಳನ್ನು ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧೇಯಕದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನಸಭೆಯ ಇನ್ನಿತರ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಿಧೇಯಕವನ್ನು ಸ್ವಾಗತಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.  ವಿಧೇಯಕವು ಸರ್ವಾನುಮತದಿಂದ ಅಂಗೀಕಾರವಾಯಿತು.  

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.