ಮಹಿಳಾ ಪ್ರಧಾನ "ಫೀನಿಕ್ಸ್" ಚಿತ್ರದ ಚಿತ್ರೀಕರಣ ಪೂರ್ಣ

Jun 27, 2025 - 23:13
 0
ಮಹಿಳಾ ಪ್ರಧಾನ "ಫೀನಿಕ್ಸ್" ಚಿತ್ರದ ಚಿತ್ರೀಕರಣ ಪೂರ್ಣ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರ "ಫೀನಿಕ್ಸ್". 

ಆರ್ ವಾಸುದೇವ ರೆಡ್ಡಿ ಅರ್ಪಿಸುವ, 
ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಮಹಿಳಾ ಪ್ರಧಾನ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ "ಫೀನಿಕ್ಸ್" ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದೆ.

ಬಹಳ ದಿನಗಳ ನಂತರ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ಫೀನಿಕ್ಸ್" ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಓಂಪ್ರಕಾಶ್ ರಾವ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ದೀಪು ಪಿ.ಆರ್ ಬರೆದಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿರುವ "ಫೀನಿಕ್ಸ್" ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿದ್ದು, ಹೆಸರಾಂತ ಸಾಹಸ ನಿರ್ದೇಶಕರು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.      

ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ, ಕೃತಿಕ ಲೋಗೊ, ಎಸ್ತರ್ ನರೋನ, ರಂಗಾಯಣ ರಘು, ಅವಿನಾಶ್, ಚಿತ್ರಾ ಶೆಣೈ, ಶ್ರೀಧರ್(ಈ ಟಿವಿ), ಪ್ರಸನ್ನ, ವಿನೋದ್ ಕಿನ್ನಿ, ಮೇಘನಾ ಎಸ್ ಕೆ ಮುಂತಾದವರು "ಫೀನಿಕ್ಸ್" ಚಿತ್ರದ ತಾರಾಬಳಗದಲ್ಲಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.