ಗುರುವಾರದ ವಿಧಾನ ಪರಿಷತ್ ಕಲಾಪದ ಫೋಟೋಗಳು

Aug 22, 2025 - 00:33
Aug 22, 2025 - 00:39
 0
ಗುರುವಾರದ ವಿಧಾನ ಪರಿಷತ್ ಕಲಾಪದ ಫೋಟೋಗಳು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಧಾನ ಪರಿಷತ್ತಿನಲ್ಲಿ ಕಾಗದ ಪತ್ರಗಳ ಮಂಡನೆ :
ಬೆಂಗಳೂರು: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (2025ರ ವರದಿ ಸಂಖ್ಯೆ – 6) ಯನ್ನು ಸದನದಲ್ಲಿ ಮಂಡಿಸಿದರು. ಇದೇ ಸಮಯದಲ್ಲಿ 2025-26ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತನ್ನು ಸದನದಲ್ಲಿ ಒಪ್ಪಿಸಿದರು.

ವಿಧಾನ ಪರಿಷತ್ತಿನಲ್ಲಿ ಚುನಾವಣಾ ಪ್ರಸ್ತಾವ ಅಂಗೀಕಾರ :
ಬೆಂಗಳೂರು: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು  “ವಿಧಾನ ಮಂಡಲದ / ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಚುನಾವಣೆ ನಡೆಸುವ ಬದಲು ಮಾನ್ಯ ಸದಸ್ಯರುಗಳನ್ನು ನಾಮನಿರ್ದೇಶಿಸಲು ಮಾನ್ಯ ಸಭಾಪತಿಯವರಿಗೆ ಅಧಿಕಾರ ನೀಡುವ” ಕುರಿತ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದರು. ಮಾನ್ಯ ಸಭಾಪತಿಗಳಿಂದ ಸದರಿ ಪ್ರಸ್ತಾವಕ್ಕೆ ಅಂಗೀಕಾರ ದೊರೆಯಿತು.

“ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2024” ಹಿಂಪಡೆತ : 
ಬೆಂಗಳೂರು : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ “ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2024”ನ್ನು ಹಿಂಪಡೆಯುವಂತೆ ಮಾನ್ಯ ಸಭಾಪತಿಗಳ ಅನುಮತಿ ಕೋರಿದರು. ಸಭಾಪತಿಗಳು ಸದರಿ ವಿಧೇಯಕವನ್ನು ಹಿಂಪಡೆಯಲು ಅನುಮತಿ ನೀಡಿ ವಿಧೇಯಕವನ್ನು ಹಿಂಪಡೆದರು.
 
“ಕರ್ನಾಟಕ ಸೌಹಾರ್ದ ಸಹಕಾರಿ  (ತಿದ್ದುಪಡಿ) ವಿಧೇಯಕ, 2024” ಹಿಂಪಡೆತ :
ಬೆಂಗಳೂರು: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ “ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2024”ನ್ನು ಹಿಂಪಡೆಯುವಂತೆ ಮಾನ್ಯ ಸಭಾಪತಿಗಳ ಅನುಮತಿ ಕೋರಿದರು. ಸಭಾಪತಿಗಳು ಸದರಿ ವಿಧೇಯಕವನ್ನು ಹಿಂಪಡೆಯಲು ಅನುಮತಿ ನೀಡಿ ವಿಧೇಯಕವನ್ನು ಹಿಂಪಡೆದರು.

“ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2024” ಹಿಂಪಡೆತ :
ಬೆಂಗಳೂರು : ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು ಮಾನ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ “ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2024”ನ್ನು ಹಿಂಪಡೆಯುವಂತೆ ಮಾನ್ಯ ಸಭಾಪತಿಗಳ ಅನುಮತಿ ಕೋರಿದರು. ಮಾನ್ಯ ಸಭಾಪತಿಗಳು ಸದರಿ ವಿಧೇಯಕವನ್ನು ಹಿಂಪಡೆಯಲು ಅನುಮತಿ ನೀಡಿ ವಿಧೇಯಕವನ್ನು ಹಿಂಪಡೆದರು.  

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.

ವಿಧಾನಸಭೆಯಲ್ಲಿ ಅಂಗೀಕೃತ ಸ್ವರೂಪದಲ್ಲಿರುವ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ 2025 ಅನ್ನು ಬೆಂಗಳೂರು ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಈ ವಿಧೇಯಕದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿಯಲ್ಲಿ ಜಿಬಿಎ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸ್ಪಷ್ಟನೆ ನೀಡಲಾಗಿದೆ” ಎಂದು ತಿಳಿಸಿದರು.

ಸದಸ್ಯರಾದ ಗೋವಿಂದರಾಜು, ಟಿ.ಎ ಶರವಣ, ಹೆಚ್.ಎಸ್ ಗೋಪಿನಾಥ್ ಅವರು ಮಾನ್ಯ ಉಪ ಮುಖ್ಯಮಂತ್ರಿಗಳು ಕೋರಿದ ಸ್ಪಷ್ಟನೆಗೆ ಉತ್ತರ ನೀಡಿದ ಸಚಿವರು, “ನಾವು ಅನೇಕ ಬಾರಿ ನೋಡಿರುವಂತೆ ರಾಜ್ಯ ಸರ್ಕಾರ ಒಂದು ಪಕ್ಷ ಅಧಿಕಾರದಲ್ಲಿದ್ದರೆ, ಪಾಲಿಕೆಯಲ್ಲಿ ಮತ್ತೊಂದು ಪಕ್ಷ ಅಧಿಕಾರದಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಹಾಗೂ ರಾಜ್ಯ ಸರ್ಕಾರ ಪಾಲಿಕೆಗಳನ್ನು ನಿಯಂತ್ರಿಸುವಂತಾಗದಂತೆ ಎಚ್ಚರಿಕೆ ವಹಿಸಲು ಈ ತಿದ್ದುಪಡಿ ತರಲಾಗಿದೆ” ಎಂದರು.

“ಕೆಲವು ಶಾಸಕರು ಜನಸಂಖ್ಯೆ ಹಾಗೂ ವಾರ್ಡ್ ರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ನಾವು ಬಳಸಿರುವುದು 2011ರ ಜನಗಣತಿ. ಆಗ ಒಂದು ವಾರ್ಡ್ ನಲ್ಲಿ 18 ಸಾವಿರ ಜನಸಂಖ್ಯೆ ಇದ್ದರೆ ಈಗಿನ ಪರಿಸ್ಥಿತಿಯಲ್ಲಿ 30 ಸಾವಿರದಷ್ಟು ಇರಲಿದೆ. ಮುಂದೆ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡಿಸುವ ಸಂದರ್ಭದಲ್ಲಿ ನಿಮ್ಮ ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ವಿಚಾರವನ್ನು ಬೇರೆ ರೂಪದಲ್ಲಿ ಚರ್ಚೆಗೆ ಪ್ರಸ್ತಾವನೆ ನೀಡಿ, ಆಗ ಈ ವಿಚಾರವಾಗಿ ನಿಮಗಿರುವ ಅನುಮಾನಗಳಿಗೆ ಸಂಪೂರ್ಣವಾಗಿ ವಿವರಣೆ ನೀಡುತ್ತೇನೆ. ಈಗ ಈ ವಿಧೇಯಕ ಅಂಗೀಕಾರ ಮಾಡಿಕೊಡಿ” ಎಂದು ತಿಳಿಸಿದರು. ನಂತರ ಸದನದಲ್ಲಿ ಅಲ್ಪ ಚರ್ಚೆಯ ಬಳಿಕ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025ಕ್ಕೆ ಮಾನ್ಯ ಸಭಾಪತಿಗಳಿಂದ ಅಂಗೀಕಾರ ದೊರೆಯಿತು.

ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ :

ಬೆಂಗಳೂರು: ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ. ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ, 2023 (2023ರ ಕರ್ನಾಟಕ ವಿಧೇಯಕ 28) ರಿಟ್ ಅರ್ಜಿ ಸಂಖ್ಯೆ 2024ರ 11822 (ಜಿಇ-ಆರ್‍ಇಎಸ್-ಪಿಐಎಲ್) ನಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವುದು, ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವಿಕೆ ಅಥವಾ ಅನುಪಾಲನೆಯನ್ನು ಮೇಲ್ವಿಚಾರಣೆ ನಡೆಸಲು ಗೊತ್ತುಪಡಿಸಿದ ಅಧಿಕಾರಿಯನ್ನಾಗಿ ಒಬ್ಬ ಅಧಿಕಾರಿಯನ್ನು ನೇಮಿಸುವುದು ಮತ್ತು ನ್ಯಾಯಾಲಯದ ಆದೇಶದ ಅನುಪಾಲನೆಗಾಗಿ ಕಾರ್ಯವಿಧಾನವನ್ನು ನಿರ್ದಿಷ್ಟಪಡಿಸುವುದು ಅವಶ್ಯಕವೆಂದು ತಿದ್ದುಪಡಿಗೆ ಪರಿಗಣಿಸಲಾಗಿದೆಯೆಂದು ತಿಳಿಸಿದರು.

ಸದನದಲ್ಲಿ ಪರಿಷತ್ ಸದಸ್ಯರುಗಳಾದ ಪಿ.ಹೆಚ್. ಪೂಜಾರ್, ಐವಾನ್ ಡಿಸೋಜ, ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಹಣಮಂತ ನಿರಾಣಿ ರುದ್ರಪ್ಪ, ಟಿ.ಎ. ಶರವಣ, ಮಂಜೇಗೌಡ ಅವರ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ವಿಧೇಯಕವನ್ನು ಅಂಗೀಕಾರಕ್ಕಾಗಿ ಮಂಡಿಸಿದರು. ನಂತರ ಮಾನ್ಯ ಸಭಾಪತಿಗಳಿಂದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ 2025ಕ್ಕೆ ಅಂಗೀಕಾರ ದೊರೆಯಿತು.


ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ 2025 ಅಂಗೀಕಾರ :

ಬೆಂಗಳೂರು : ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಗೃಹ ಇಲಾಖೆ ಸಚಿವರಾದ ಡಾ. ಜಿ ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕದಲ್ಲಿ ನೂತನವಾಗಿ ನಿರ್ಮಾಣ ಮಾಡುವಂತಹ 21 ಮೀಟರ್‍ಗೆ ಮೇಲ್ಪಟ್ಟ ಬಹು ಮಹಡಿ ಕಟ್ಟಡಗಳಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆಗಾಗಿ ಶೇಕಡ 10 ರಷ್ಟು ಶುಲ್ಕ ಹಾಗೂ ಶೇಕಡ 1 ರಷ್ಟು ಸೆಸ್‍ನ್ನು ವಿಧಿಸಲು ತಿದ್ದುಪಡಿ ತರಲು ಅಂಗೀಕಾರ ನೀಡುವಂತೆ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು.

ಈ ವಿಧೇಯಕದಲ್ಲಿ ಶಾಲಾ ಕಾಲೇಜುಗಳಿಗೆ ವಿನಾಯತಿ ಇರುತ್ತೆ. ಅಲ್ಲದೇ ಅಗ್ನಿಶಾಮಕ ಠಾಣೆಗಳಲ್ಲಿ ತಂತ್ರಜ್ಞಾನ ಆಧಾರಿತ ಉಪಕರಣಗಳು ಹಾಗೂ ವಾಹನಗಳ ಖರೀದಿಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಅನುದಾನವನ್ನು ಸಹ ನೀಡಿರುತ್ತಾರೆ. ಹೊಸ ವಾಹನಗಳ ಖರೀದಿಗೆ ಕ್ರಮ ವಹಿಸಲಾಗಿದೆ ಅಲ್ಲದೇ ಪ್ರತಿ ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಮುಖ್ಯಮಂತ್ರಿಗಳು ಸೂಚನೆಯನ್ನೂ ಸಹ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಕ್ರಮ ವಹಿಸಿದ್ದೇವೆ ಎಂದು ತಿಳಿಸಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಕೋರಿದರು. ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಟಿ.ಎ. ಶರವಣ, ಗೋವಿಂದರಾಜು, ರವಿಕುಮಾರ್, ಅರುಣ್ ಡಿ.ಎಸ್., ಮಂಜೇಗೌಡ, ಅವರ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ವಿಧೇಯಕವನ್ನು ಅಂಗೀಕರಿಸುವಂತೆ ಮಾನ್ಯ ಸಭಾಪತಿಗಳಿಗೆ ಕೊರಿದರು. ಮಾನ್ಯ ಸಭಾಪತಿಗಳಿಂದ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಅಂಗೀಕಾರ ದೊರೆಯಿತು.

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2025 ಅಂಗೀಕಾರ :

ಬೆಂಗಳೂರು : ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ಅಂತರ್ಜಲ ವೃದ್ದಿಗೆ ಸರ್ಕಾರವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅಂತರ್ಜಲ ಉಳಿವಿಗಾಗಿ ಅಂತರ್ಜಲದ ನೀರನ್ನು ಯಥೇಚ್ಚವಾಗಿ ಉಪಯೋಗಿಸುವರಿಗೆ ಹಾಗೂ ಟ್ಯಾಂಕರ್‍ಗಳಿಗೆ ಶುಲ್ಕ ವಿಧಿಸುವ ಸಲುವಾಗಿ ವಿಧೇಯಕದಲ್ಲಿ ತಿದ್ದುಪಡಿ ತರುವುದು ಅವಶ್ಯಕವಾಗಿದೆ. ಇಪ್ಪತ್ತೈದು ಸಾವಿರ ಲೀಟರ್ ನೀರು ಉಪಯೋಗಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ, ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷದ ವರೆÀಗೆ ನೀರನ್ನು ಉಪಯೋಗಿಸುವವರಿಗೆ ಪ್ರತಿ ಸಾವಿರ ಲೀಟರ್‍ಗೆ ರೂ 1.00 ರಂತೆ ಶುಲ್ಕ ಹಾಗೂ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಹೆಚ್ಚಾಗಿ ನೀರು ಉಪಯೋಗಿಸುವವರಿಗೆ ಪ್ರತಿ ಸಾವಿರ ಲೀಟರ್‍ಗೆ ರೂ. 2.00 ರಂತೆ ಶುಲ್ಕ ವಿಧಿಸುವ ಸಂಬಂಧವಾಗಿ ಈ ವಿಧೇಯಕದಲ್ಲಿ ಅಲ್ಪ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ತಿಳಿಸುತ್ತಾ ಅಂಗೀಕಾರಕ್ಕಾಗಿ ಕೋರಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಐವಾನ್ ಡಿಸೋಜಾ, ಪಿ.ಹೆಚ್. ಪೂಜಾರ್, ಗೋವಿಂದರಾಜು, ಟಿ.ಎ. ಶರವಣ, ಡಿ.ಎಸ್. ಅರುಣ್, ಮಂಜೇಗೌಡ, ಡಿ.ಟಿ. ಶ್ರೀನಿವಾಸ್, ಚಿದಾನಂದಗೌಡ, ಗೋಪಿನಾಥ್, ರವಿಕುಮಾರ್, ಶ್ರೀಮತಿ ಭಾರತಿ ಶೆಟ್ಟಿ, ಡಾ. ಉಮಾಶ್ರೀ, ಶ್ರೀಮತಿ ಬಲ್ಕಿಸ್ ಬಾನು ಅವರುಗಳ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ಮಾನ್ಯ ಸಭಾಪತಿಗಳನ್ನು ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಕೋರಿದರು. ಮಾನ್ಯ ಸಭಾಪತಿಗಳಿಂದ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2025 ಕ್ಕೆ ಅಂಗೀಕಾರ ದೊರೆಯಿತು.


ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) (ತಿದ್ದುಪಡಿ) ವಿಧೇಯಕ 2025 ಅಂಗೀಕಾರ :

ಬೆಂಗಳೂರು: ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು)  (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ  ಅವರು ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ಸದನದಲ್ಲಿ ಯಾವುದೇ ಚರ್ಚೆಯಾಗದೆ “ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) (ತಿದ್ದುಪಡಿ) ವಿಧೇಯಕ 2025ಕ್ಕೆ” ಮಾನ್ಯ ಸಭಾಪತಿಗಳಿಂದ ಅಂಗೀಕಾರ ದೊರೆಯಿತು. 

ಗದಗ - ಬೆಟಗೇರಿ ವ್ಯಾಪಾರ, ಸಂಸ್ಕøತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ :

ಬೆಂಗಳೂರು: ಗದಗ - ಬೆಟಗೇರಿ ವ್ಯಾಪಾರ, ಸಂಸ್ಕøತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ ಗದಗ - ಬೆಟಗೇರಿ ವ್ಯಾಪಾರ, ಸಂಸ್ಕøತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರ ಪರವಾಗಿ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ. ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ವ್ಹಿ. ಸಂಕನೂರ ಅವರ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ಮಾನ್ಯ ಸಭಾಪತಿಗಳನ್ನು ವಿಧೇಯಕ್ಕೆ ಅಂಗೀಕಾರ ನೀಡುವಂತೆ ಕೋರಿದರು. ಮಾನ್ಯ ಸಭಾಪತಿಗಳಿಂದ ಗದಗ - ಬೆಟಗೇರಿ ವ್ಯಾಪಾರ, ಸಂಸ್ಕøತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2025ಕ್ಕೆ ಅಂಗೀಕಾರ ದೊರೆಯಿತು.
 
ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2025 ಅಂಗೀಕಾರ :

ಬೆಂಗಳೂರು : ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.

ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976 (1977ರ ಕರ್ನಾಟಕ ಅಧಿನಿಯಮ 14)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ, ಕಡಿತಗೊಳಿಸುವಿಕೆ ಮತ್ತು ಅನಿಯಂತ್ರಣಗೊಳಿಸುವಿಕೆಯನ್ನು ಅನುಪಾಲಿಸುವುದಕ್ಕಾಗಿ ಭಾರತ ಸರ್ಕಾರದ ಶಿಫಾರಸ್ಸುಗಳನ್ನು ನಿಯಮಿತಗೊಳಿಸುವುದು, ಕಟ್ಟಡ ನಕ್ಷೆಗಳ ಅನುಮತಿಗಳನ್ನು ಮಂಜೂರು ಮಾಡುವ ಕಾರ್ಯ ವಿಧಾನವನ್ನು ಸರಳೀಕರಿಸುವುದು, ಅನುಮತಿಸಲಾದ ನಕ್ಷೆಗಳ ಉಪಬಂಧಗಳನುಸಾರ ನಿರ್ಮಾಣಗಳನ್ನು ಮಾಡಿರುವುದನ್ನು ಸ್ಪಷ್ಟಪಡಿಸಲು ಮತ್ತು ಸ್ಥಳೀಯ ಪ್ರಾಧಿಕಾರಕ್ಕೆ ವರದಿ ನೀಡಲು, ಕಟ್ಟಡದ ನಿವೇಶನಗಳಿಗೆ ನಿರ್ಮಾಣದ ಮೊದಲು, ನಿರ್ಮಾಣದ ಸಮಯದಲ್ಲಿ ಮತ್ತು ಸಂದರ್ಭಾನುಸಾರ ನಿರ್ಮಾಣದ ತರುವಾಯ ಪಟ್ಟಿ ಮಾಡಲಾದ ವೃತ್ತಿಪರರನ್ನು ತಪಾಸಣೆ ಮಾಡಲು ಉಪಬಂಧಗಳನ್ನು ಪರಿಚಯಿಸುವುದು, ಸ್ವಯಂ ಪ್ರಮಾಣೀಕರಣದ ಮುಖಾಂತರ ಸರ್ಕಾರವು ಅಧಿಸೂಚಿಸಿದಂತೆ ಕಟ್ಟಡಗಳಿಗೆ ಅನುಮತಿ ಮಂಜೂರು ಮಾಡುವುದನ್ನು ಒಳಗೊಳ್ಳುವುದು, ಉಲ್ಲಂಘನೆಯ ಪ್ರಕರಣಗಳಲ್ಲಿ ಪಟ್ಟಿ ಮಾಡಲಾದ ವೃತ್ತಿಪರರಿಗೆ ದಂಡನಾ ಉಪಬಂಧವನ್ನು ಒಳಗೊಳ್ಳುವುದು, ಮಾಲೀಕರಿಂದ ಪಟ್ಟಿ ಮಾಡಲಾದ ವೃತ್ತಿಪರರು ಶುಲ್ಕವನ್ನು ಸಂಗ್ರಹಿಸುವುದನ್ನು ಒಳಗೊಂಡಂತೆ ಮುನ್ಸಿಪಾಲಿಟಿಗಳು ಲೆವಿಯನ್ನು ವಿಧಿಸುವುದಕ್ಕಾಗಿ ಉಪಬಂಧಗಳನ್ನು ಕಲ್ಪಿಸುವುದು ಮತ್ತು ವ್ಯಾಪಾರ ಲೈಸೆನ್ಸ್‍ನ್ನು ತರ್ಕಬದ್ಧಗೊಳಿಸುವುದು ಎಂದು ತಿಳಿಸಿದ ಸಚಿವರು ವಿಧೇಯಕವನ್ನು ಅಂಗೀಕಾರ ಮಾಡುವಂತೆ ಮಾನ್ಯ ಸಭಾಪತಿಗಳನ್ನು ಕೋರಿದರು.

“ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2025”ಕ್ಕೆ ಮಾನ್ಯ ಸಭಾಪತಿಗಳಿಂದ ಅಂಗೀಕಾರ ದೊರೆಯಿತು.  

ಶೀಘ್ರದಲ್ಲಿ ಹೊಸ ಜಾಹೀರಾತು ನೀತಿ: ಮುಖ್ಯಮಂತ್ರಿ ಸಿದ್ದರಾಮಯ್ಯ :

ಬೆಂಗಳೂರು : ಬದಲಾದ ಮಾಧ್ಯಮ ಜಗತ್ತಿಗೆ ಅನುಗುಣವಾಗಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆವತಿಯಿಂದ ಪ್ರಸ್ತುತ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಜಾಹೀರಾತು ನೀತಿ-2013 ಅನುಷ್ಠಾನ ನಿಯಮಗಳು-2014 ಕ್ಕೆ ಪೂರಕ ತಿದ್ದುಪಡಿಗಳೊಂದಿಗೆ ಶೀಘ್ರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವಿಧಾನಪರಿಷತ್‍ನ ಕಲಾಪದ ವೇಳೆ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ಅವರು ಕೇಳಿದ ರಾಜ್ಯ ಸರ್ಕಾರ ನೀಡುತ್ತಿರುವ ಜಾಹೀರಾತುಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಸರ್ಕಾರದ ಜವಬ್ದಾರಿಯಾಗಿದ್ದು, ಅದರಂತೆ ಕಾಲ-ಕಾಲಕ್ಕೆ ವಿವಿಧ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತುಗಳ ಕುರಿತಂತೆ ಸದನಕ್ಕೆ ಮಾಹಿತಿ ನೀಡಿದರು.

ವಿರೋಧ ಪಕ್ಷಗಳು ಆರೋಪಿಸುವಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ ಹಾಗೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹಣದ ಕೊರತೆಯಾಗಿಲ್ಲ. ವಿರೋಧ ಪಕ್ಷಗಳು ಹೇಳುವಂತೆ ನಾವು ಜಾಹೀರಾತು ನೀಡಿರುವುದು ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅವರಿಗೆ ಉತ್ತರವಾಗಿವೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಪ್ರತಿವರ್ಷದ ಆಯವ್ಯಯದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ವ್ಯಯಿಸುವ ಹಣ ಜಾಸ್ತಿಯಾದಂತೆ ಅವರಿಗೆ ಸಹ ಹೆಚ್ಚಾಗಿರುವುದನ್ನು ಆಯವ್ಯಯದಲ್ಲಿ ಗಮನಿಸಬಹುದಾಗಿದೆ. ಕಳೆದ ಸಾಲಿನ ಆಯವ್ಯಯದಲ್ಲಿ ಅವರಿಗಾಗಿ 39,000 ಸಾವಿರ ಕೋಟಿ ಮೀಸಲಿಡಲಾಗಿತ್ತು, ಪ್ರಸ್ತುತ ಸಾಲಿನದಲ್ಲಿ ರಾಜ್ಯದ ಆಯವ್ಯಯ ಗಾತ್ರದಂತೆ ಶೇ 24.01 ರಂತೆ ಒಟ್ಟು 42,017 ಕೋಟಿ ರೂ ಮೀಸಲಿಡಲಾಗಿದೆ. ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ಹೇಳಿದರು.

ಜಾಹೀರಾತು ನೀಡುವುದಕ್ಕೆ ಸಂಬಂಧಿಸಿದಂತೆ 2020-21 ಆರ್ಥಿಕ ವರ್ಷದಲ್ಲಿ 111.15 ಕೋಟಿ ರೂ,  2021-22 ರಲ್ಲಿ 86.08 ಕೋಟಿ ರೂ, 2022-23 ರಲ್ಲಿ 113.20 ಕೋಟಿ ರೂ, 2023-24 ರಲ್ಲಿ 101.38 ಕೋಟಿ ರೂ ಹಾಗೂ ಅದರಲ್ಲಿ 29.46 ಕೋಟಿ ರೂ ಹಿಂದಿನ ವರ್ಷದ ಬಾಕಿ ಪಾವತಿಸಲಾಗಿದೆ, 2024-25 ರಲ್ಲಿ 95.45 ಕೋಟಿ ರೂ ವ್ಯಯಿಸಿಲಾಗಿದ್ದು, ಇದರಲ್ಲಿ ಹಿಂದಿನ ಸರ್ಕಾರದ ಬಾಕಿಗಳನ್ನು ಸಹ ಪಾವತಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಜಾಹೀರಾತು ಅನುಷ್ಠಾನ ನಿಯಮಗಳನ್ವಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸಂದರ್ಭಾನುಸಾರ ರಾಜ್ಯ ರಾಷ್ಟ್ರೀಯ ಹಬ್ಬ ಮಹನೀಯರ ಜಯಂತಿ ಮತ್ತು ಸರ್ಕಾರದ ಸಾಧನೆ ಹಾಗೂ ಯೋಜನೆ/ಕಾರ್ಯಕ್ರಮಗಳ ಕುರಿತು ಆಕರ್ಷಕ ಮತ್ತು ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಸಮುಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ-371 (ಜೆ) ಅನುಷ್ಠಾನಕ್ಕಾಗಿ ಉಪಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ :

ಬೆಂಗಳೂರು : ರಾಜ್ಯದಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ-371 (ಜೆ) ಗೆ ಸಂಬಂಧಿಸಿದಂತೆ ನೇಮಕಾತಿ ಮತ್ತು ಮುಂಬಡ್ತಿಗಳಲ್ಲಿನ ಗೊಂದಲಗಳನ್ನು ಪರಿಹರಿಸಲು ಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಲಾಗಿದ್ದು, ಯಾವುದೇ ಸಮಸ್ಯೆಗಳಿದ್ದಲ್ಲಿ ಉಪಸಮಿತಿಯ ಗಮನಕ್ಕೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಈ ಕುರಿತಂತೆ ಇಂದು ವಿಧಾನಪರಿಷತ್‍ನ ಕಲಾಪದ ವೇಳೆ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅವರು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು 317 (ಜೆ) ನಡಿ ನೇಮಕಾತಿಗೆ ಸಂಬಂಧಿಸಿದಂತೆ ಕಾಲ-ಕಾಲಕ್ಕೆ ಹೊರಡಿಸಲಾಗಿರುವ ಸುತ್ತೋಲೆಗಳಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ಪರಿಹರಿಸಿ 3 ಜೂನ್ 2025 ರಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ವೃಂದ ಹಾಗೂ ಮಿಕ್ಕುಳಿದ ವೃಂದಕ್ಕೆ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸುವುದು ಸೇರಿದಂತೆ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಇತ್ತೀಚಿನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದ್ದು, ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ತಪ್ಪುಗಳಾದಲ್ಲಿ ನೇಮಕಾತಿ ಪ್ರಾಧಿಕಾರವೇ ನೇರಹೊಣೆ ಎಂದು ತಿಳಿಸಲಾಗಿದೆ ಎಂದರು.

ವಿಧಾನಸಭೆಯಲ್ಲಿ ಕಾಗದಪತ್ರಗಳನ್ನು ಮಂಡನೆ :

ಬೆಂಗಳೂರು : ಭಾರತ ಸಂವಿಧಾನದ 151 (2)ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ  ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷಕ್ಕೆ ಅನುಸರಣಾ ಲೆಕ್ಕಪರಿಶೋಧನೆ-ಸಿವಿಲ್) (2025ರ ವರದಿ ಸಂಖ್ಯೆ 6) ನ್ನು  ಮುಖ್ಯಮಂತ್ರಿಗಳ ಪರವಾಗಿ ಗೃಹಸಚಿವ  ಪರಮೇಶ್ವರ್ ಅವರು ಮಂಡಿಸಿದರು.

ವಿಧಾನಸಭೆಯಲ್ಲಿ ವಿಧೇಯಕಗಳ ಮಂಡನೆ :

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ತಿರಸ್ಕøತವಾದ ರೂಪದಲ್ಲಿರುವ 2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಕಾರ್ಯದರ್ಶಿಯಗಳು ಮಂಡಿಸಿದರು. 2025ನೇ ಸಾಲಿನ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ವಿಧಾನಸಭೆಯಲ್ಲಿ ಮಂಡಿಸಿದರು.

ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ :

ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಲಿಫ್ಟ್‍ಗಳ, ಎಸ್ಕ್‍ಲೇಟರ್‍ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‍ಗಳ (ತಿದ್ದುಪಡಿ) ವಿಧೇಯಕವನ್ನು ಇಂಧನ ಸಚಿವರು  ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
 
2025ನೇ ಸಾಲಿನ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಫ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕವನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ವಿಧಾನಸಭೆಯಲ್ಲಿ  ಅಂಗೀಕರಿಸಬೇಕೆಂದು ಕೋರಿದರು. ವಿಧಾನಸಭೆಯ ಸದಸ್ಯರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.  

2025ನೇ ಸಾಲಿನ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ವಿಧಾನಸಭೆಯಲ್ಲಿ  ಅಂಗೀಕರಿಸಬೇಕೆಂದು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.  

ಕರ್ನಾಟಕ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ತಿರಸ್ಕøತವಾದ ರೂಪದಲ್ಲಿರುವ 2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು  ಪುನರ್ ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಮುಖ್ಯಮಂತ್ರಿಗಳ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು  ಕೋರಿದರು.

ಮೇಲ್ಮನೆಯಲ್ಲಿ ಸದರಿ ವಿಧೇಯಕದ ಕುರಿತು ಚರ್ಚೆಯಾಗಿ ಕೆಲವೊಂದು ತಿದ್ದುಪಡಿಗಳೊಂದಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.  ವಿಧಾನಸಭೆಯ ಸದಸ್ಯರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
 
2025ನೇ ಸಾಲಿನ ಕರ್ನಾಟಕ ಸಾಂಪ್ರಾದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ದ ರಕ್ಷಣೆ) ವಿಧೇಯಕವನ್ನು ಪಶುಸಂಗೋಪನೆ ಮತ್ತು ರೇμÉ್ಮ ಸಚಿವರು    ವಿಧೇಯಕದ ಕುರಿತು ಸದನದಲ್ಲಿ ಪ್ರಸ್ತಾಪಿಸಿ ವಿಧೇಯಕದ ವಿವರಗಳನ್ನು ನೀಡಿದರು. 2024-25ರ ಆಯವ್ಯಯದಲ್ಲಿ ಸದರಿ ಪ್ರಸ್ತಾವನೆಯನ್ನು ಜಾರಿಗೊಳಿಸಲು ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ನೋಂದಣಿ ಮತ್ತು ಗುರುತಿಸುವಿಕೆಗಾಗಿ ಹಾಗೂ ಸಾಂಪ್ರದಾಯಿಕವಾಗಿ ಅಲೆಮಾರಿ ಕುರಿಗಾಹಿಗಳ ಪ್ರಯೋಜನಕ್ಕಾಗಿ ಸ್ಕೀಮುಗಳನ್ನು ಅನುμÁ್ಠನಗೊಳಿಸಲು ಕ್ಷೇಮಾಭಿವೃದ್ಧಿ ಮಂಡಲಿಯ ಮೂಲಕ ನಿರ್ವಹಿಸಬೇಕಾದ ನಿಧಿಯನ್ನು ಸ್ಥಾಪಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಶಾಸನವೊಂದನ್ನು ಅಧಿನಿಯಮಿತಿಗೊಳಿಸುವುದು ಅವಶ್ಯಕವೆಂದ ಪರಿಗಣಿಸಲಾಗಿದೆ. ಮುಂದುವರೆದು ಕ್ಷೇಮಾಭಿವೃದ್ಧಿ ನಿಧಿಗೆ ಹಣಕಾಸು ಒದಗಿಸಲು ಮಾರುಕಟ್ಟೆ ಶುಲ್ಕವನ್ನು ವಿಧಿಸುವುದು ಯುಕ್ತವೆಂದು ಪರಿಗಣಿಸಬೇಕಾಗಿದೆ. ಸದರಿ ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು.

ಸದರಿ ವಿಧೇಯಕ ಬಗ್ಗೆ ವಿಧಾನ ಸಭೆಯ ಸದಸ್ಯರು, ಶಾಸಕರು, ಸಚಿವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿರೋಧಪಕ್ಷದ ನಾಯಕ ಅಶೋಕ್ ರವರು ಸದರಿ ವಿಧೇಯಕವನ್ನು ಸ್ವಾಗತಿಸಿ  ಕುರಿಗಾಹಿಗಳಿಗೆ ಯಾವುದೇ ಮನೆಗಳು ಇರುವುದಿಲ್ಲ .  ಸ್ಕೀಮುಗಳನ್ನು  ರೂಪಿಸುವಾಗ ಒಂದು ಟೆಂಟ್ ಸೌಲಭ್ಯವನ್ನು ನೀಡುವುದನ್ನು ಸೇರ್ಪಡೆಗೊಳಿಸಬೇಕು ಹಾಗೂ ಕುರಿಗಾಹಿಗಳಲ್ಲಿ ಹೆಣ್ಣುಮಕ್ಕಳು ಇರುತ್ತಾರೆ. ಇವರು ಒಂದೂರಿನಿಂದ ಇನ್ನೊಂದು ಊರಿಗೆ ಅಲೆಮಾರಿಗಳಾಗಿ ಹೋಗುತ್ತಾರೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾದಾಗ ಸ್ಥಳೀಯ ಪೆÇಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡು ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ರೂಪಿಸುವುದು ಅವಶ್ಯಕವೆಂದರು.

ಟಿಬಿ ಜಯಚಂದ್ರ ಅವರು ಕುರಿಗಾಹಿಗಳಿಗೆ ವಿಧೇಯಕ ತಂದಿರುವುದು ಸ್ವಾಗತಾರ್ಹ. ಮುಖ್ಯವಾಗಿ ಕುರಿಗಳಿಗೆ ಲಸಿಕೆ ಮತ್ತು ಚಿಕಿತ್ಸೆ ಕಾಲಕಾಲಕ್ಕೆ ಕಡ್ಡಾಯವಾಗಿ ಸಿಗುವಂತೆ ಮಾಡಬೇಕು. ಕುರಿಗಾಹಿಗಳಿಗೆ ಪೆÇಲೀಸರಿಂದ ರಕ್ಷಣೆ ಒದಗಿಸಬೇಕು,  ಕುರಿಗಾಹಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಆರ್ಥಿಕ ದೃಷ್ಟಿಯಿಂದ ರೈತನಿಗೆ ಒತ್ತು ನೀಡುವ ಬಿಲ್ ಆಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಶಾಸಕ ಧೀರಜ್ ಮುನಿರಾಜು, ಸುರೇಶ್ ಗೌಡ, ಶೀಘ್ರವಾಗಿ ಮಂಡಳಿ ರಚಿಸಿ ಸದರಿ ಮಂಡಳಿಯ ಮುಖಾಂತರ ಕುರಿಗಾಹಿಗಳಿಗೆ ಸ್ಕೀಮುಗಳನ್ನು ಜಾರಿಗೊಳಿಸಿ ಕುರಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವಂತೆ ತಿಳಿಸಿದರು.  ಶಾಸಕರಾದ ಶಿವಲಿಂಗೇಗೌಡರು ಸದರಿ ವಿಧೇಯಕವನ್ನು ಸ್ವಾಗತಿಸಿ  ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ವಿರುದ್ಧದ ಅಪರಾಧಗಳ ಬಗ್ಗೆ ಪ್ರಸ್ತಾಪಿಸಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲದೇ ಯಾವುದೇ ಸಾರ್ವಜನಿಕ ಸ್ವತ್ತು.ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ (ಮೀಸಲು ಅರಣ್ಯವನ್ನು ಹೊರತುಪಡಿಸಿ) ಪ್ರವೇಶಿಸುವುದನ್ನು ನಿರಾಕರಿಸಿದ್ದಲ್ಲಿ ಅಂಥ ವ್ಯಕ್ತಿಯು ಒಂದು ವರ್ಷದ ಅವಧಿಯ ಕಾರಾವಾಸದಿಂದ ಮತ್ತು ಐವತ್ತು ಸಾವಿರ ರೂಪಾಯಿಗಳ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ಎಂಬುದಾಗಿ ಪ್ರಸ್ತಾಪಿಸಿದೆ.  ಕೆಲವೊಂದು ಕಡೆಗಳಲ್ಲಿ ಅರಣ್ಯ ಪಾಲಕರೇ ಕುರಿಗಾಹಿಗಳಿಗೆ ತೊಂದರೆ ಕೊಡುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬಿಲ್‍ನ್ನು ಸ್ವಾಗತಿಸಿ ಕೇವಲ ಕರ್ನಾಟಕವಲ್ಲದೇ ಹೊರ ರಾಜ್ಯಗಳಿಂದಲೂ ಕುರಿಗಾಹಿಗಳು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ.  ಅರಣ್ಯ ಪ್ರದೇಶಗಳಲ್ಲಿ ಕುರಿಗಾಹಿಗಳಿಗೆ ನಿμÉೀಧ ಹೇರಲಾಗಿದೆ. ಕುರಿಗಾಹಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪಾಲಕರಿಗೆ ಕುರಿಗಾಹಿಗಳಿಗೆ ಯಾವುದೇ ತೊಂದರೆ ಕೊಡಬಾರದೆಂದು ಸೂಚನೆ ನೀಡಲಾಗಿದೆ ಹಾಗೂ ಅರಣ್ಯವಲ್ಲದ ಪ್ರಧೇಶಗಳಿಗೆ ಕುರಿಗಾಹಿಗಳನ್ನು ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧೇಯಕದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನಸಭೆಯ ಇನ್ನಿತರ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಿಧೇಯಕವನ್ನು ಸ್ವಾಗತಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.  ವಿಧೇಯಕವು ಸರ್ವಾನುಮತದಿಂದ ಅಂಗೀಕಾರವಾಯಿತು.  


2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕಾರಕ್ಕೆ ವಿಧಾನಸಭೆ ಆಯ್ಕೆ ಸಮಿತಿ ರಚನೆ- ಯು.ಟಿ ಖಾದರ್ :

ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಲು ವಿಧಾನಸಭೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಸಭಾಧ್ಯಕ್ಷ ಯು.,ಟಿ. ಖಾದರ್ ಹೇಳಿದರು.

ಇಂದು ವಿಧಾನಸಭೆಯಲ್ಲಿ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕಂದಾಯ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಕೋರಿದರು.

ಶಾಸಕರಾದ ಪೆÇನ್ನಣ್ಣವರು ಸದರಿ ವಿಧೇಯಕವನ್ನು ಪ್ರಸ್ತಾಪಿಸಿ ಸದರಿ ವಿಧೇಯಕವು ಅಸಂಗತವಲ್ಲದ ಮತ್ತು ಅವಿಭಕ್ತ ಕುಟುಂಬದ ಎಲ್ಲಾ ಅಧಿಭೋಗದಾರರ ಹೆಸರುಗಳ ಅನುಸಾರ ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಭೂಮಿಗಳಿಗೆ ನಿಯಮಿಸಲಾದ ವಿಧಾನದಲ್ಲಿನ ಇತರೆ ಸೇರ್ಪಡೆಗಳು, ರದ್ದತಿಗಳು ಮತ್ತು ಸರಪಡಿಸುವಿಕೆಗಳು ಸಂಬಧಿಸಿದಾಗಿದ್ದು ಈ ವಿಧೇಯಕವು ತಿದ್ದುಪಡಿಗೆ ತದ್ವಿರುದ್ದವಾಗಿದೆ. ಸದರಿ ವಿಧೇಯಕವನ್ನು ಮತ್ತೊಮ್ಮೆ ಪರ್ಯಾಲೋಚಿಸಿ ತಿದ್ದುಪಡಿ ಮಾಡುವುದು ಅಗತ್ಯವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿರೋಧಪಕ್ಷದ ನಾಯಕರು ಇದೊಂದು ಗಂಭೀರ ವಿಚಾರವಾಗಿದ್ದು ಪರಿಶೀಲನೆ ಮಾಡುವುದು ಅಗತ್ಯವಾಗಿರುತ್ತದೆ ವಿಧಾನಸಭೆ ಆಯ್ಕೆ ಸಮಿತಿ ರಚಿಸಿ ಆಯ್ಕೆ ಸಮಿತಿಯ ಮುಂದೆ ಮಂಡಿಸಿ ತೀರ್ಮಾನಿಸುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸದರಿ ವಿಧೇಯಕವನ್ನು ಪರ್ಯಾಲೋಚಿಸಿ ಇತ್ಯರ್ಥಪಡಿಸಲು ವಿಧಾನಸಭೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಸಭಾಧ್ಯಕ್ಷ ಯು..ಟಿ ಖಾದರ್ ವಿಧಾನಸಭೆಯಲ್ಲಿ ತಿಳಿಸಿದರು.

ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ವಿಧೇಯಕ, 2025  -ಸದನ ಸಮಿತಿ ರಚನೆ- ಯು..ಟಿ ಖಾದರ್ :

ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ವಿಧೇಯಕ, 2025  ಅನ್ನು ಪರ್ಯಾಲೋಚಿಸಿ ಅಂಗೀಕರಿಸಲು ಸದನ ಸಮಿತಿ ರಚಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ವಿಧೇಯಕ, 2025  -ನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು.

ವಿಧೇಯಕವು  ಕಾರ್ಯಕ್ರಮಗಳು ಮತ್ತು ಸಮಾರಂಭದಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಮತ್ತು ಜನ ಗುಂಪುಗೂಡುವುದನ್ನು ನಿರ್ವಹಿಸುವುದು, ಕಾನೂನು ಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂದಿಸುವುದು ಎಂದು ವಿಧೇಯಕದ ಮೂಲ ಉದ್ದೇಶವನ್ನು ಗೃಹಸಚಿವ ಜಿ. ಪರಮೇಶ್ವರ್ ಸದನದಲ್ಲಿ ಪ್ರಸ್ತಾಪಿಸಿದರು.

ಜನಸಂದಣಿ ನಿರ್ವಹಣೆ ಎಂಬುದು ಕಾರ್ಯಕ್ರಮ ಯೋಜನೆ, ಕಾರ್ಯಕ್ರಮದ ಪೂರ್ವದಲ್ಲಿ ಕಾರ್ಯಕ್ರಮ ಆಯೋಜಕರೊಂದಿಗೆ ಸಂಪರ್ಕ ಅನ್ವಯವಾಗುವಲ್ಲಿ ಅನುಮತಿಗಳ ನೀಡುವಿಕೆ, ಮಾಹಿತಿ ಸಂಗ್ರಹಣೆ ಮತ್ತು ಇತರೆ ವಿಧಾನಗಳ ಮೂಲಕ ಕಾನೂನು ಬದ್ಧ ಸ್ಥಿತಿಗತಿಯನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಕಾರ್ಯಕ್ರಮದ ಮೊದಲು ನಡೆಯುವ ವೇಳೆ ಮತ್ತು ನಂತರದಲ್ಲಿನ ಕಾನೂನುಬದ್ಧ ಗುಂಪುಸೇರುವಿಕೆಯನ್ನು ನಿರ್ವಹಿಸಲು ಈ ವಿಧೇಯಕವನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ವಿಧೇಯಕವು ಖಾಸಗಿ ಆವರಣಗಳೊಳಗೆ ಆಚರಿಸುವ ಅಥವಾ ನಡೆಸುವ ಕೌಟುಂಬಿಕ ಸಮಾರಂಭಗಳು ಅಥವಾ ಕಾರ್ಯಕ್ರಮಗಳಾದ ಮದುವೆ ಮುಂತಾದವುಗಳಿಗೆ ಅನ್ವಯವಾಗುವುದಿಲ್ಲ ಎಂದು ವಿಧೇಯಕದ ಇತರೆ ನಿಯಮಗಳನ್ನು ಸದನದಲ್ಲಿ ವಿವರಿಸಿದರು.

ವಿಧೇಯಕದ ನಿಯಮಗಳನ್ನು ಆಲಿಸಿದ ವಿಧಾನಸಭೆಯ ಸದಸ್ಯರು, ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸುಧೀರ್ಘವಾಗಿ ಸದರಿ ವಿಧೇಯಕದ ಕುರಿತು ಚರ್ಚಿಸಿದರು. ವಿರೋಧ ಪಕ್ಷದ ನಾಯಕರು ಹಾಗೂ ವಿಧಾನಸಭೆಯ ಇತರೆ ಸದಸ್ಯರು ಇದೊಂದು ಗಂಭೀರವಾದ ವಿಧೇಯಕವಾಗಿದ್ದು ಇದನ್ನು ತ್ವರಿತವಾಗಿ ತೀರ್ಮಾನಿಸುವುದು ಸೂಕ್ತವಾಗಿರುವುದಿಲ್ಲ. ಸದನ ಸಮಿತಿಯನ್ನು ರಚಿಸಿ ಸಮಿತಿಯ ಮುಂದೆ ಮಂಡಿಸಿ ಚರ್ಚಿಸಿ ತೀರ್ಮಾನಿಸುವುದು ಉತ್ತಮವೆಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಗೃಹಸಚಿವ ಡಾ; ಜಿ.. ಪರಮೇಶ್ ಸದನ ಸಮಿತಿಯ ಮುಂದೆ ಸದರಿ ವಿಧೇಯಕವನ್ನು ಮಂಡಿಸಿ, ಪರ್ಯಾಲೋಚಿಸಿ ಅಂಗೀಕರಿಸಲು ಸದನ ಸಮಿತಿ ರಚನೆಗೆ ತಮ್ಮ ಸಹಮತಿ ನೀಡಿದರು. ವಿಧಾನಸಭೆಯ ಸಭಾದ್ಯಕ್ಷರು ಸದರಿ ಬಿಲ್‍ಗೆ ಸದನ ಸಮಿತಿಯನ್ನು ರಚಿಸಲು ತೀರ್ಮಾನಿಸಿ ವಿಧೇಯಕವನ್ನು ಸದನ ಸಮಿತಿಯ ಮುಂದೆ ಮಂಡಿಸಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.