ನಿಗಮಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Dr. B.R. Ambedkar Development Corporation invites applications for various projects

Aug 17, 2025 - 08:51
Aug 17, 2025 - 09:02
 0
ನಿಗಮಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ವಿಜಯಪುರ :
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಅದಿಜಾಂಬವ, ಭೋವಿ, ಸಫಾಯಿ ಕರ್ಮಚಾರಿ, ಮತ್ತು ತಾಂಡಾ ಅಭಿವೃದ್ಧಿ ನಿಗಮಗಳು 2025-26ನೇ ಸಾಲಿನ ಅನೇಕ ಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿವೆ.

ಯೋಜನೆಗಳ ಪಟ್ಟಿ:

  1. ಸ್ವಯಂ ಉದ್ಯೋಗ ನೇರಸಾಲ – ಕುರಿ ಸಾಕಾಣಿಕೆ
  2. ಸ್ವಾವಲಂಬಿ ಸಾರಥಿ
  3. ಪುಡ್ ಕಾರ್ಟ್ (ಮೊಬೈಲ್ ಕಿಚನ್)
  4. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ
  5. ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ
  6. ಗಂಗಾ ಕಲ್ಯಾಣ & ಭೂ ಒಡೆತನ ಯೋಜನೆ

ಕೊನೆಯ ದಿನಾಂಕ: 10-09-2025

•ಅರ್ಜಿ ಸಲ್ಲಿಸುವ ಮಾರ್ಗಗಳು:

  1. ಕರ್ನಾಟಕ ಒನ್
  2. ಗ್ರಾಮ ಒನ್
  3. ಸೇವಾ ಸಿಂಧು ಪೋರ್ಟಲ್

2023-24 ಅಥವಾ 2024-25ರಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಮರುಅರ್ಜಿಯ ಅಗತ್ಯವಿಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ :08352-276743 ಸಂಪರ್ಕಿಸಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.