ಆಲಮೇಲ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷರಾಗಿ ರವಿ ಬಿರಾದಾರ ನೇಮಕ
Ravi Biradar appointed as Taluka President of Alamel Taluk Government Employees Association

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮೇಲ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಲಮೇಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಎರಡನೇ ಭಾರಿ ಶಿಕ್ಷಣ ಇಲಾಖೆಯ ರವಿ ಜಿ ಬಿರಾದಾರ (ಗುಂದಗಿ) ಅವರನ್ನು ಆ.೨೧ ಗುರುವಾರ ನೇಮಕ ಮಾಡಲಾಗಿದೆ.
ಈ ನೇಮಕವನ್ನು ಜಿಲ್ಲಾ ಅಧ್ಯಕ್ಷ ಸುರೇಶ್ ಶೇಡಶ್ಯಾಳ ಅವರು ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಅನುಮೋದನೆ ಮೇರೆಗೆ ನೇಮಕ ಮಾಡಿದ್ದು, ಅದಕ್ಕೆ ಅನುಗುಣವಾಗಿ ಅವರಿಗೆ ಅಧಿಕೃತ ಪ್ರಮಾಣ ಪತ್ರವನ್ನು ನೀಡಲಾಯಿತು.
ಈ ವೇಳೆ ಸರ್ಕಾರಿ ನೌಕರರ ಸಂಘದ ನೂತನ ತಾಲೂಕು ಅಧ್ಯಕ್ಷ ರವಿ ಬಿರಾದಾರ ಅವರು ಮಾತನಾಡಿ “ನನ್ನ ನೇಮಕಕ್ಕೆ ಕಾರಣರಾದ ಎಲ್ಲಾ ಹಿರಿಯರಿಗೂ ಕೃತಜ್ಞತೆಯಲ್ಲಿದ್ದೇನೆ. ನೌಕರರ ಹಿತದೃಷ್ಟಿಯಿಂದ ಸದಾ ಶ್ರದ್ಧೆಯಿಂದ ಕೆಲಸ ಮಾಡುವೆ " ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ್ ಹತ್ತಿ, ಗೌರವಾಧ್ಯಕ್ಷ ವಿಶ್ವನಾಥ ಬೆಳ್ಳೆನವರ, ಹಿರಿಯ ಉಪಾಧ್ಯಕ್ಷ ಗಂಗಾಧರ ಜೇವುರ, ಕ್ರೀಡಾ ಕಾರ್ಯದರ್ಶಿ ನಿಜು ಮೇಲಿನಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಳುಸೂರ, ಜಿಲ್ಲಾ ಕ್ರೀಡಾ ಇಲಾಖೆಯ ಅಧಿಕಾರಿ ಮತ್ತು ಜಿಲ್ಲಾ ಹಿರಿಯ ಉಪಾಧ್ಯಕ್ಷ ರಾಜಶೇಖರ್ ದೈವಾಡಿ ಕೋಶಾಧ್ಯಕ್ಷ ಸೈಯದ್ ಜುಬೇರ್ ಕೆರೂರ, ಜಿಲ್ಲಾ ಕಾರ್ಯದರ್ಶಿ ಶಿವರಾಜ ಬಿರಾದಾರ, ಕಾರ್ಯಾಧ್ಯಕ್ಷ ಜಿ ಟಿ ಗೊಂಗಟಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.