ಅಕ್ರಮ ಅಕ್ಕಿ ಸಾಗಾಟ : ಆಹಾರ ಇಲಾಖೆ ದಾಳಿ : ಅಕ್ಕಿ ವಶ

Aug 21, 2025 - 23:38
Aug 22, 2025 - 01:29
 0
ಅಕ್ರಮ ಅಕ್ಕಿ ಸಾಗಾಟ : ಆಹಾರ ಇಲಾಖೆ ದಾಳಿ : ಅಕ್ಕಿ ವಶ

ಅಪರಾಧಕ್ಕೆ ಸವಾಲು  ಕನ್ನಡ ದಿನಪತ್ರಿಕೆ 

ವಿಜಯಪುರ : ರಾಷ್ಟ್ರೀಯ ಹೆದ್ದಾರಿ-೫೨ರ ಅರ್ಜನಾಳ ಕ್ರಾಸ್ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-೫೨ರ ಅರ್ಜನಾಳ ಕ್ರಾಸ್ ಹತ್ತಿರ ಲಾರಿಯಲ್ಲಿ  ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ, ಒಟ್ಟು ೧೨೧.೩೦ ಕ್ವಿಂಟಲ್ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದು ಅರ್ಶದ ದಾಂಡೇವಾಲೆ ಇವರ ಮೇಲೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿಯಲ್ಲಿ ಇಂಡಿ ತಾಲ್ಲೂಕಿನ ಆಹಾರ ನಿರೀಕ್ಷಕರಾದ ಸಿದ್ರಾಮೇಶ ಹಲಸಂಗಿ, ಝಳಕಿ ಪಿಎಸ್‌ಐ ಮಂಜುನಾಥ ತಿರಕ್ಕಣ್ಣವರ ಪೋಲಿಸ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿಗಳು ಇದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.