ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ

Jun 22, 2025 - 21:49
 0
ರಾಜ್ಯ ಸರ್ಕಾರದ ವಿರುದ್ಧ  ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ
ಜಿಲ್ಲಾ ಬಿಜೆಪಿ ಘಟಕದಿಂದ ಭಾನುವಾರ ನಗರದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ .
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಸಚಿವ ಜಮೀರ್ ಖಾನ್ ಅವರ ಆಪ್ತ ಕಾರ್ಯದರ್ಶಿ ಜೊತೆಗೆ ಆಳಂದ ಶಾಸಕ ಬಿ.ಆರ್.ಪಾಟೀಲ ದೂರವಾಣಿಯಲ್ಲಿ ವಸತಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಭಾನುವಾರ ನಗರದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ,ಆಶ್ರಯ ಯೋಜನೆಯಡಿ ಬಡವರಿಗೆ ಹಂಚುವ ಬದಲು ಅವರಿಂದ ಲಂಚ ಪಡೆದಿರುವುದು ಶಾಸಕ ಬಿ.ಆರ್.ಪಾಟೀಲ ಅವರು ದೂರವಾಣಿಯಲ್ಲಿ ವಸತಿ ಸಚಿವ ಜಮೀರ ಅಹ್ಮದಖಾನ್ ಅವರ ಸಹಾಯಕರ ಜೊತೆ ಸಾಬೀತಾಗಿದೆ ಕೂಡಲೇ ಮುಖ್ಯಮಂತ್ರಿ ಸೇರಿದಂತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಈ ಹಿಂದೆ ರಾಜ್ಯದಲ್ಲಿ ೨೦೧೨ ರಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದ ಸಂದರ್ಭದಲ್ಲಿ ಅಂದಿನ ವಸತಿ ಸಚಿವರಾದ ವಿ.ಸೋಮಣ್ಣ ಅವರು ಒಂದೊ0ದು ವಿಧಾನಸಭಾ ಕ್ಷೇತ್ರಕ್ಕೆ ೧೦ ರಿಂದ ೩೦ ಸಾವಿರ ಮನೆಗಳನ್ನು ಬಡವರಿಗೆ ಉಚಿತವಾಗಿ ಕೊಡುವುದರ ಮೂಲಕ ದಾಖಲೆ ನಿರ್ಮಿಸಿತ್ತು ಎಂದರು.

ವಿಜಯಪುರ ಜಿಲ್ಲೆಯ ನಾಗಠಾಣ ಹಾಗೂ ಸಿಂದಗಿ ತಾಲೂಕಿನ ರಾಂಪೂರ ಗ್ರಾಮ ಪಂಚಾಯ್ತಿಯಲ್ಲಿ ಕೂಡ ಬಡವರಿಗೆ ಮನೆ ನೀಡಲು ಲಂಚದ ಆರೋಪ ಕೇಳಿ ಬಂದಿದ್ದು, ಯಾವ ಬಡವರು ಮನೆ ಪಡೆಯಲು ಲಂಚ ನೀಡಬಾರದು  ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ,ವಸತಿ ಇಲಾಖೆಯಲ್ಲಿ ಬಡವರ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಲಂಚ ನೀಡಬೇಕು ಎಂದು ಗಂಭೀರ ಆರೋಪ ಮಾಡಿದ್ದ ಆಳಂದ ಶಾಸಕ ಬಿ.ಆರ್.ಪಾಟೀಲ ಅವರ ಹೇಳಿಕೆ ನೀಡಿದ್ದಾರೆ. ಹಣ ತೆಗೆದುಕೊಂಡು ತಂದರೆ ಬಡವರಿಗೂ ಹಣ ಕೊಡಬೇಕಾಗುತ್ತದೆ ಅವರು ಬಡವರಿಗೆ ಸಾಧ್ಯವಿಲ್ಲ. ಮತ್ತೆ ಮನೆಗಳು ಶ್ರೀಮಂತರಿಗೆ ಸಿಗುತ್ತವೆ ಹೊರತು ಬಡವರಿಗಲ್ಲ. ಆದ್ದರಿಂದ ಜನರು ಬಂದು ನಿಮ್ಮನ್ನು ಕಿತ್ತೊಗೆಯುವ ಮುನ್ನ ನೀವೆ ಅಧಿಕಾರದಿಂದ ತೊಲಗಬೇಕು ಎಂದು ಆಕ್ರೊಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ,ಮಾಜಿ ವಿ.ಪ.ಸದಸ್ಯ  ಅರುಣ್ ಶಹಾಪುರ, ನಾಗಠಾಣ ಮತಕ್ಷೇತ್ರದ ಮುಖಂಡರಾದ ಉಮೇಶ್ ಕಾರಜೋಳ ಮಹೇಂದ್ರ ನಾಯಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಪುಸಿಂಗ್ ರಾಜಪೂತ, ಗೋಪಾಲ್ ಘಟಕಾಂಬಳೆ,ಸುರೇಶ್ ಬಿರಾದಾರ್ ಭೀಮಾಶಂಕರ್ ಹದನೂರ  ಬಾಬು ಚವ್ಹಾಣ ಚಿದಾನಂದ ಚಲವಾದಿ ಸಂಜಯ್ ಕನಮಡಿ ಪ್ರಮೋದ್ ಬಡಿಗೇರ್,ಎಂ ಎಸ್ ಕರಡಿ  ವಿಟ್ಟಲ್ ಹೊಸಪೇಟೆ ಎಸ್ ಈ ಪಾಟೀಲ ಬಾಬು ಚವಾಣ್ ಕಾಂತು ಶಿಂಧೆ ಚಿನ್ನು ಚಿನಗುಂಡಿ ವಿಕಾಸ ಪದಕಿ ಉಮೇಶ ಕೊಳಕೂರ, ರಾಜೇಶ ತಾವಸೆ,  ರಾಜು ಮಗಿಮಠ ಸಂದೀಪ್ ಪಾಟೀಲ್ ಸಿದ್ದು ಮಲ್ಲಿಕಾರ್ಜುನಮಠ ರಾಹುಲ್ ಜಾಧವ್ ಪ್ರಕಾಶ್ ಮಿರ್ಜಿ, ಸಂತೋಷ ಜಾಧವ  ಕೃಷ್ಣ ಗುನ್ನಳಕರ್ ಸಂಪತ್ ಕೋಳಿ,ವಿಜಯ ಜೋಶಿ,ಸಂತೋಷ ನಿಂಬರಗಿ ,ಬಾಲು ಗುಗಿಹಾಲ, ಭರತ್ ಕೋಳಿ, ರಾಜು ವಾಲಿ ಬಿ ಆರ್ ಎಂಟಮಾನ್ ಅಶ್ವಥ್ ರೆಬಿನಾಲ್ ವಕೀಲರಾದ ಡಿ ಜಿ ಬಿರಾದಾರ್ ಎಸ್ ಎಸ್  ಡೊಳ್ಳಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮಲ್ಲಮ್ಮ ಜೋಗೂರು ಶಿಲ್ಪಾ ಕುದರಗೊಂಡ ಮಂಡಲಗಳು ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.