ಗಣೇಶ ಚತುರ್ಥಿ ಹಬ್ಬ : ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ

Ganesh Chaturthi festival: Order to appoint special magistrates to maintain law and order

Aug 22, 2025 - 22:55
 0
ಗಣೇಶ ಚತುರ್ಥಿ ಹಬ್ಬ : ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ವಿಜಯಪುರ ಜಿಲ್ಲಾದ್ಯಂತ ಆಗಸ್ಟ್ ೨೭ ರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರರು ತಾಲೂಕು ದಂಡಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿ  ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.
ಆಗಸ್ಟ್ ೨೭ ಪ್ರತಿಷ್ಠಾಪನೆ ಹಾಗೂ ಆಗಸ್ಟ್ ೩೧, ಸೆಪ್ಟೆಂಬರ್ ೨, ೪ ಹಾಗೂ ಸೆ.೬ರವರೆಗೆ  ವಿಜಯಪುರ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ (ಮೊ:೯೫೯೯೯೦೯೭೨೪), ಇಂಡಿ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತçದ (ಮೊ:೯೭೩೯೭೪೯೭೩೨), ವಿಜಯಪುರ ತಾಲೂಕಿಗೆ ತಹಶೀಲ್ದಾರ ಪಿ.ಎಸ್.ಚನಗೊಂಡ (ಮೊ:೯೪೮೨೮೯೬೩೭೦), ಇಂಡಿ ತಾಲೂಕಿಗೆ ತಹಶೀಲ್ದಾರ್ ಬಿ.ಎಸ್. ಕಡಕಭಾವಿ (ಮೊ:೯೯೦೨೭೪೮೨೪೦), ಬಸವನ ಬಾಗೇವಾಡಿ ತಾಲೂಕಿಗೆ ತಹಶೀಲ್ದಾರರಾದ ವೈ.ಎಸ್.ಸೋಮನಕಟ್ಟಿ (ಮೊ:೯೦೦೮೭೧೨೭೬೫), ಮುದ್ದೇಬಿಹಾಳ ತಾಲೂಕಿಗೆ ತಹಶೀಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ (ಮೊ:೮೮೬೧೪೩೮೫೫೪), ಸಿಂದಗಿ ತಾಲೂಕಿಗೆ ತಹಶೀಲ್ದಾರರಾದ ಕರೆಪ್ಪ ಬೆಳ್ಳಿ (ಮೊ: ೮೧೦೫೭೬೮೬೭೧), ಬಬಲೇಶ್ವರ ತಾಲೂಕಿಗೆ ತಹಶೀಲ್ದಾರರಾದ ಶ್ರೀಮತಿ ಶಾಂತಲಾ ಚಂದನ (ಮೊ:೯೫೩೮೩೮೫೧೦೬),ತಿಕೋಟಾ ತಾಲೂಕಿನ ತಹಶೀಲ್ದಾರರಾದ ಸುರೇಶ ಚವಲರ್ (ಮೊ:೯೪೪೯೯೪೩೦೨೨), ಕೊಲ್ಹಾರ ತಾಲೂಕಿನ ತಹಶೀಲ್ದಾರರಾದ ಎಸ್.ಎಂ. ಮ್ಯಾಗೇರಿ (ಮೊ:೮೦೫೦೦೬೯೩೧೬), ನಿಡಗುಂದಿ ತಾಲೂಕಿಗೆ ತಹಶೀಲ್ದಾರರಾದ ಎ.ಡಿ.ಅಮರಾವಡಗಿ  (ಮೊ:೯೪೮೨೨೬೮೫೩೩), ತಾಳಿಕೋಟಿ ತಾಲೂಕಿಗೆ ತಹಶೀಲ್ದಾರರಾದ ಶ್ರೀಮತಿ ವಿನಯಾ ಹೂಗಾರ (ಮೊ:೮೮೫೧೫೪೨೭೩೯), ದೇವರಹಿಪ್ಪರಗಿ ತಾಲೂಕಿಗೆ ತಹಶೀಲ್ದಾರರಾದ ಪ್ರಕಾಶ ಸಿಂದಗಿ (ಮೊ:೯೯೪೫೮೫೬೨೭೪), ಆಲಮೇಲ ತಾಲೂಕಿಗೆ ಪ್ರಭಾರಿ ತಹಶೀಲ್ದಾರರಾದ ಧನಪಾಲ್ ದೇವೂರು  (ಮೊ:೯೯೭೨೫೫೮೧೯೬) ಹಾಗೂ ಚಡಚಣ ತಾಲೂಕಿಗೆ ತಹಶೀಲ್ದಾರರಾದ ಎಸ್.ಬಿ.ಇಂಗಳೆ (ಮೊ:೯೯೦೦೭೭೬೦೦೯) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ. 
ಅದರಂತೆ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ಮಹಾವೀರ ಬೋರಣವರನ್ನು  ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂಬರ್ ೦೧ ರಿಂದ ೧೭ರವರೆಗೆ, ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ ೧೮ ರಿಂದ ೩೫ರವರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಕಾರಿಗಳಾದ ಪ್ರಶಾಂತ ಪೂಜಾರಿ (ಮೊ: ೯೮೪೪೮೪೯೨೩೮) ಅವರನ್ನು  ನಿಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.