ಕಲ್ಲೇಶಿವೋತ್ತಮರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ: ಕೆಯುಡಬ್ಲ್ಯೂಜೆ ಅಭಿನಂದನೆ

Aug 18, 2025 - 23:18
 0
ಕಲ್ಲೇಶಿವೋತ್ತಮರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ: ಕೆಯುಡಬ್ಲ್ಯೂಜೆ ಅಭಿನಂದನೆ
ಹಿರಿಯ ಪತ್ರಕರ್ತ ಕಲ್ಲೇಶಿವೋತ್ತಮರಾವ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು: ಕರ್ನಾಟಕ ಸರ್ಕಾರ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾಗಿರುವ ತೋಂಬತ್ತೈದು ವರ್ಷದ ಹಿರಿಯ ಪತ್ರಕರ್ತ ಕಲ್ಲೇಶಿವೋತ್ತಮರಾವ್ ಅವರಿಗೆ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಭಿನಂದನೆಗಳು.
ಸುವರ್ಣ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘ (ಕೆಯುಡಬ್ಲ್ಯೂಜೆ) ಅವರ ಮನೆಗೆ ತೆರಳಿ ಮನೆಯಂಗಳದಲ್ಲಿ ಅವರನ್ನು ಗೌರವಿಸಿದ್ದು ಅಭಿಮಾನದ ಸಂಗತಿಯಾಗಿತ್ತು. ಮನೆಯಂಗಳದಲ್ಲಿ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ನಮನ ಕಾರ್ಯಕ್ರಮವನ್ನು ಕಲ್ಲೇ ಅವರ ಮನೆಯಿಂದಲೇ ಪ್ರಾರಂಭಿಸಲಾಗಿತ್ತು. ಅಷ್ಟೂ ಪತ್ರಕರ್ತರ ಅನುಭವವನ್ನು ಅಮೃತಬೀಜ ಕೃತಿ ಮೂಲಕ ಕೆಯುಡಬ್ಲ್ಯೂಜೆ ದಾಖಲೀಕರಣ ಮಾಡಿದ್ದು ಈ ಕೃತಿಯನ್ನು ಬಹುರೂಪಿ ಸಂಸ್ಥೆ ಹೊರತಂದಿದೆ. ಹಿರಿಯ ಪತ್ರಕರ್ತರಾದ ಕಲ್ಲೇ ಶಿವೋತ್ತಮರಾವ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಭಿನಂದಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.