ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಜಿಲ್ಲೆಯಾದ್ಯಂತ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆ.೧೮ರಿಂದ ಹಮ್ಮಿಕೊಳ್ಳಲಾಗಿದೆ.
ಆ.೧೮ರಂದು ಸಿಂದಗಿ ತಾಲೂಕಾ ಕ್ರೀಡಾಕೂಟ ಸಿಂದಗಿ ತಾಲೂಕಾ ಕ್ರೀಡಾಂಗಣದಲ್ಲಿ, ಆಗಸ್ಟ್ ೧೯ರಂದು ಮುದ್ದೇಬಿಹಾಳ ತಾಲೂಕಿನ ಕ್ರೀಡಾಕೂಟವನ್ನು ಮುದ್ದೇಬಿಹಾಳದ ಎಂಜಿವಿಸಿ ಕಾಲೇಜ್ ಮುದ್ದೇಬಿಹಾಳದಲ್ಲಿ ಹಾಗೂ ದೇವರ ಹಿಪ್ಪರಗಿಯ ಶ್ರೀ ಸಿದ್ಧೇಶ್ವರ ಪ್ರೌಢಶಾಲೆ ಮೈದಾನದಲ್ಲಿ, ಆಗಸ್ಟ್ ೨೧ರಂದು ತಾಳಿಕೋಟೆ ತಾಲೂಕಿನ ಕ್ರೀಡಾಕೂಟವನ್ನು ಬ್ರಿಲಿಯಂಟ್ ಹೈಸ್ಕೂಲಿನಲ್ಲಿ ಹಾಗೂ ಆಲಮೇಲ ತಾಲೂಕಿನ ಕ್ರೀಡಾಕೂಟವನ್ನು ಸರಕಾರಿ ಹಿರಿಯ ಮಾದರಿ ಶಾಲೆಯ ಆವರಣದಲ್ಲಿ, ಆ.೨೪ರಂದು ಬಬಲೇಶ್ವರ ತಾಲೂಕಿನ ಕ್ರೀಡಾಕೂಟವನ್ನು ಮಮದಾಪೂರದ ಕೆಪಿಎಸ್‌ಯಲ್ಲಿ, ಆ.೨೫ರಂದು ಬಸವನ ಬಾಗೇವಾಡಿ ತಾಲೂಕಿನ ಎಸ್.ಬಿ.ಪಿ.ಯು ಕಾಲೇಜಿನ ಮೈದಾನದಲ್ಲಿ, ಆ.೨೬ರಂದು ಇಂಡಿ ತಾಲೂಕಿನ ಕ್ರೀಡಾಕೂಟವನ್ನು ತಾಲೂಕು ಕ್ರೀಡಾಂಗಣದಲ್ಲಿ, ಆ.೨೯ರಂದು ನಿಡಗುಂದಿ ತಾಲೂಕು ಕ್ರೀಡಾಕೂಟವನ್ನು ಎಂ.ಪಿಎಸ್ ಶಾಸಕರ ಮಾದರಿ ಶಾಲೆಯ ಆಲಮಟ್ಟಿಯಲ್ಲಿ, ಚಡಚಣ ತಾಲೂಕಿನ ಸಂಗಮೇಶ್ವರ ಪ್ರೌಢ ಶಾಲೆ ಚಡಚಣದಲ್ಲಿ, ವಿಜಯಪುರ ತಾಲೂಕಿನ ಕ್ರೀಡಾಕೂಟವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಾಗೂ ಆ.೩೧ರಂದು ತಿಕೋಟಾ ತಾಲೂಕಿನ ಕ್ರೀಡಾಕೂಟವನ್ನು ಸೋಮದೇವರಹಟ್ಟಿಯಲ್ಲಿ, ಕೋಲಾರ ತಾಲೂಕಿನ ಕ್ರೀಡಾಕೂಟವನ್ನು ಸಂಗಮೇಶ್ವರ ಪ್ರಾಥಮಿಕ/ಪ್ರೌಢಶಾಲೆಯ ಮೈದಾನದಲ್ಲಿ, ಆಯೋಜಿಸಲಾಗಿದೆ.
ಮುದ್ದೇಬಿಹಾಳ ತಾಲೂಕಿಗೆ ಸಂಬ0ಧಿಸಿದ0ತೆ, ಸುರೇಶ ಆಲೂರ ಮೊ:೮೯೭೧೮೦೬೮೬೫, ತಾಳಿಕೋಟೆ ತಾಲೂಕಿಗೆ ಸುರೇಶ ಆಲೂರ ಮೊ:೮೯೭೧೮೦೬೮೫೨,ತಿಕೋಟಾ ತಾಲೂಕಿಗೆ ಎನ್.ಆರ್.ಚವ್ಹಾಣ ಮೊ:೯೪೮೦೬೭೮೦೯೭,ಬಬಲೇಶ್ವರ ತಾಲೂಕಿಗೆ ಎನ್.ಆರ್ ಚವ್ಹಾಣ ಮೊ:೯೪೮೦೬೭೮೦೯೭, ಇಂಡಿ ತಾಲೂಕಿಗೆ ಸಿ.ಎಸ್.ವಾಲೀಕಾರ ಮೊ:೯೮೮೦೧೪೬೨೧೯, ಬಸವನ ಬಾಗೇವಾಡಿ ತಾಲೂಕಿಗೆ ಎಸ್.ಎಸ್.ಅವಟಿ ಮೊ:೯೬೬೩೨೯೭೬೫೪, ಕೋಲಾರ ತಾಲೂಕಿಗೆ ಎಸ್.ಎಸ್.ಅವಟಿ ಮೊ:೯೬೬೩೨೯೭೬೫೪, ನಿಡಗುಂದಿ ತಾಲೂಕಿಗೆ ಎಸ್.ಎಸ್.ಅವಟಿ ಮೊ:೯೬೬೩೨೯೭೬೫೪,ಚಡಚಣ ತಾಲೂಕಿಗೆ ಎಂ.ಬಿ.ಬಿರಾದಾರ ಮೊ: ೯೪೪೮೫೮೦೭೨೯,ವಿಜಯಪುರ ತಾಲೂಕಿಗೆ ಎಸ್.ಜೆ ಬಿರಾದಾರ ಮೊ:೯೯೦೧೧೧೧೫೩೮, ಸಿಂದಗಿ ತಾಲೂಕಿಗೆ ರಮೇಶ ಬಿರಾದಾರ ಮೊ:೮೧೦೫೮೪೯೩೪೭, ದೇವರ ಹಿಪ್ಪರಗಿ ತಾಲೂಕಿಗೆ ರಮೇಶ ಬಿರಾದಾರ ಮೊ:೮೧೦೫೮೪೯೩೪೭ ಹಾಗೂ ಆಲಮೇಲ ತಾಲೂಕಿಗೆ ರಮೇಶ ಬಿರಾದಾರ ಮೊ:೮೧೦೫೮೪೯೩೪೭ ಕ್ರೀಡಾಕೂಟದ ಸಂಯೋಜಕರಾದ ಇವರನ್ನು ಸಂಪರ್ಕಿಸಬಹುದಾಗಿದೆ.
ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಆಧಾರ ಕಾರ್ಡನ್ನು ಕಡ್ಡಾಯವಾಗಿ ಜೊತೆಗೆ ತರಬೇಕು. ರಾಜ್ಯದಲ್ಲಿ ವಾಸಿಸುವ ಕ್ರೀಡಾಪಡುಗಳು ಅರ್ಹರಾಗಿದ್ದು, ಕ್ರೀಡಾಪಟುಗಳು https://main.d109hjbrd8psy4. amplifyapp.com/KA-sports/ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೧೦೮೫, ಮೊ: ೯೪೮೦೮೮೬೫೫೫ ಸಂಖ್ಯೆಗೆ ಸಂಪರ್ಕಿಸುವ0ತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.