ಫ್ರೌಡಶಾಲೆ ಮಂಜೂರು: ಶಾಸಕ ಮನಗೂಳಿ ಕಾರ್ಯ ಸ್ತುತ್ಯಾರ್ಹ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ: ಬೋರಗಿ ಗ್ರಾಮಕ್ಕೆ ಫ್ರೌಡಶಾಲೆ ಮಂಜೂರು ಮಾಡುವ ಮೂಲಕ ಬೋರಗಿ ಗ್ರಾಮದ ಜನರ ಬಹುದಿನಗಳ ಬಹುದೊಡ್ಡ ಬೇಡಿಕೆ ಈಡೇರಿಸುವ ಮೂಲಕ ಬೋರಗಿ ಗ್ರಾಮಕ್ಕೆ ಶಾಸಕ ಅಶೋಕ ಮನಗೂಳಿ ಅವರ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಬರಹಗಾರ ಸಾಹಿತಿ ಮೌಲಾಲಿ ಆಲಗೂರ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೋರಗಿ ಮತ್ತು ಪುರದಾಳ ಗ್ರಾಮಗಳಲ್ಲಿ ಫ್ರೌಡಶಾಲೆ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಗ್ರಾಮದಲ್ಲಿ ಫ್ರೌಡಶಾಲೆ ಇಲ್ಲದೇ ವಿಧ್ಯಾರ್ಥಿಗಳು ಸಿಂದಗಿ ಪಟ್ಟಣಕ್ಕೆ ಹೋಗಿ ಬರುವುದರಲ್ಲಿ ತಮ್ಮ ಸಮಯ ಬಸ್‌ನಲ್ಲಿಯೇ ವ್ಯರ್ಥವಾಗುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಹಳ ತೊಂದರೆ ಉಂಟಾಗಿ ಅಭ್ಯಾಸ ಕುಂಠಿತಗೊಳ್ಳುತ್ತಿತ್ತು. ಆದ್ದರಿಂದ ಬೋರಗಿ ಹಾಗೂ ಪುರದಾಳ ಗ್ರಾಮದ ಯುವ ಸಮೂಹ ಮತ್ತು ವಿಧ್ಯಾರ್ಥಿಗಳು ಶಾಸಕರಿಗೆ ಬೋರಗಿ ಗ್ರಾಮದಲ್ಲಿ ಒಂದು ಸುಸಜ್ಜಿತ ಸರ್ಕಾರಿ ಫ್ರೌಡಶಾಲೆ ನಿರ್ಮಿಸುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿ ಸ್ಪಂದಿಸಿದ ಶಾಸಕರು ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ರೂ.೨ಕೋಟಿ ೧೦ಲಕ್ಷ ಅನುದಾನ ನೀಡಿ ಫ್ರೌಡಶಾಲೆ ನಿರ್ಮಾಣದ ಜೊತೆಗೆ ನೂತನ ಇಂಗ್ಲಿಷ್ ಮಾಧ್ಯಮ ಶಾಲೆ ಸಹ ಮಂಜೂರು ಮಾಡಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಅಭಿನಂದನಾರ್ಹ. ಶಾಸಕರಿಗೆ ಬೋರಗಿ ಗ್ರಾಮಸ್ಥರಿಂದ ಅತೀ ಶೀಘ್ರದಲ್ಲೇ ಅಭಿನಂದನಾರ್ಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯ ಮೂಲ ತಿಳಿಸಿದ್ದಾರೆ.