ಬೂದಿಹಾಳ-ಫೀರಾಪೂರ ಅವೈಜ್ಞಾನಿಕತೆ ಸರಿಪಡಿಸಿ : ನಡಹಳ್ಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಗೆ ಸಂಬ0ದಿಸಿ ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಯು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ ಇದನ್ನು ಸರಿಪಡಿಸಲು ಅವಕಾಶವಿದೆ ಅದನ್ನು ಜಿಲ್ಲಾ ಉಸ್ತುವಾರಿ ಸಚೀವ ಎಂ.ಬಿ.ಪಾಟೀಲರು ಮಾಡಬೇಕೆಂದು ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.
ಪಟ್ಟಣದಲ್ಲಿ ಸ್ವಗ್ರಹೊಂದರಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ನೀರಾವರಿ ಯೋಜನೆಗೆ ಸಂಬAದಿಸಿ ಮೊದಲು ಬಂಡೆಪ್ಪನಹಳ್ಳಿ ಸಾಲವಾಡಗಿ ಮತ್ತು ಫೀರಾಪೂರದಲ್ಲಿ ಸ್ಟೋರೇಜ್ ಟ್ಯಾಂಕ್ ನಿರ್ಮಾಣ ಮಾಡಬೇಕು ಆದರೆ ಕೃಷಿ ಹೊಂಡದ ರೀತಿ ನಿರ್ಮಾಣ ಮಾಡಲಾಗಿದೆ ಹೀಗೆ ಮಾಡಿದರೆ ಯಾವ ರೈತರಿಗೆ ನೀರು ಮುಟ್ಟುವದಿಲ್ಲಾ ನೀರು ಸಮತಳವಾಗಿ ಹೋಗುವದಿಲ್ಲಾವೆಂದರು. ಈ ಎರಡು ಭಾಗಗಳಲ್ಲಿ ಬೃಹತ್ ಆಕಾರದ ಸ್ಟೋರೇಜ್ ಟ್ಯಾಂಕ್ ಅವಶ್ಯಕತೆ ಇದೆ ಇದು ಎಂ.ಬಿ.ಪಾಟೀಲರಿಗೆ ಗೊತ್ತಿದೆ ಆದರೂ ಈ ಕಾರ್ಯ ಹಿಂದೆಟು ಹಾಕಲು ಕಾರಣವೇನೆಂದು ಪ್ರಶ್ನೀಸಿದ ಅವರು ರೈತರ ಜಮೀನುಗಳಿಗೆ ಈಗಾಗಲೇ ಔಟಲೈಟ್ ಬಾಕ್ಸ್ಗಳನ್ನು ಕೂಡಿಸಲಾಗಿದೆ ಅದರಲ್ಲಿ ಬರುವ ನೀರು ಮೊದಲು ಬಾಕ್ಸ್ ಕುಳಿತಿರುವ ರೈತನ ಜಮೀನಿಗೆ ನೀರು ಬಿಟ್ಟುಕೊಳ್ಳುತ್ತಾನೆ ಸುತ್ತಲಿನ ಎಲ್ಲ ರೈತರಿಗೆ ನೀರು ಸಿಗುವದಿಲ್ಲಾವೆಂದ ಅವರು ಹೀಗಾಗಿ ರೈತರು ಪೈಪುಗಳನ್ನು ಒಡೆದು ನೀರು ತೆಗೆದುಕೊಳ್ಳುತ್ತಾರೆ ಇದರಿಂದ ಇಡೀ ಯೋಜನೆಯೇ ಹಳ್ಳ ಹಿಡಿದು ಹೋಗಲಿದೆ ಈಗಾಗಲೇ ಪೈಪ್‌ಗಳು ಒಡೆದಿರುವದು ಸಚೀವರ ಗಮನಕ್ಕೂ ಬಂದಿದೆ ಹೀಗಿದ್ಯಾಗ್ಯೂ ಸಚೀವರು ಗಮನಹರಿಸದಿರುವದು ಅವರು ರೈತರ ಮೇಲೆ ಹೊಂದಿರುವ ಪ್ರೀತಿ ಎತ್ತಿ ತೋರಿಸುತ್ತದೆ ಎಂದ ನಡಹಳ್ಳಿ ಅವರು ಈ ಸ್ಟೋರೇಜ್ ಟ್ಯಾಂಕ್ ನಿರ್ಮಾಣದಿಂದ ಕಾಲುವೆಯ ಮುಖಾಂತರವೇ ರೈತರಿಗೆ ಏಷ್ಟು ಬೇಕು ಅಷ್ಟು ನೀರು ಕೊಡಬಹುದು ವಿಜಯಪುರ ಮುಖು ಕಾಲುವೆಯಿಂದ ಮುಳವಾಡ ಏತ ನೀರಾವರಿ ಯೋಜನೆ ಮಾಡಿದ್ದಾರೆ ೨೧೦ ಕೀಲೋ ಮೀಟರ್ ಆಗಲಿದೆ ಅಷ್ಟು ದೂರ ನೀರು ಹರಿದ ಉದಾಹರಣೆಯೇ ಇಲ್ಲಾ ರೈತರಿಗೆ ನೀರು ಕೊಡುವ ಉದ್ದೇಶವಿಲ್ಲಾ ಮುಗೀಗೆ ತುಪ್ಪ ಸವರುವಂತಹ ಕೆಲಸ ಮಾಡಿದ್ದಾರೆ ಈಗಲೂ ಏನೂ ಆಗಿಲ್ಲಾ ಎಂ.ಬಿ.ಪಾಟೀಲರು ಮನಸ್ಸು ಮಾಡಿದರೆ ಆ ಕಾಲುವೆಗಳಿಗೂ ನೀರು ಹರಿಸಬಹುದು ನಾರಾಯಣಪೂರ ಹಿನ್ನೀರಿನಿಂದ ಕೊಂಡಗೂಳಿಯವರೆಗೆ ನೀರು ಲಿಪ್ಟ ಮಾಡಿ ಕಾಲುವೆಗೆ ನೀರು ಹರಿಸಿದರೆ ಎಲ್ಲ ರೈತರ ಜಮೀನುಗಳಿಗೆ ನೀರು ಬರಲಿವೆ ಇದನ್ನು ಸಚೀವರು ಅರಿತುಕೊಳ್ಳಬೇಕು ಎಂದ ಮಾಜಿ ಶಾಸಕ ನಡಹಳ್ಳಿ ಅವರು ಓಟು ಹಾಕುವ ರೈತರಲ್ಲಿ ಜನರಲ್ಲಿ ಜಾಗೃತಿ ಬರಬೇಕು ವಿಧಾನ ಸೌದಕ್ಕೆ ಆಯ್ಕೆ ಯಾಗಿ ಹೋದವರಿಗೆ ಪರಿಜ್ಞಾನವೆಂಬುದು ಇರಬೇಕು ಎಲ್ಲ ರೈತರಿಗೆ ನೀರು ಕೊಡಬೇಕೆಂಬ ಇಚ್ಚಾಶಕ್ತಿ ಅವರಲ್ಲಿರಬೇಕೆಂದರು. ನಾನು ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಮಾಡಿದ ಹೋರಾಟ ಪಕ್ಷಾತೀತವಾಗಿತ್ತು ಬೂದಿಹಾಳ-ಫೀರಾಪೂರ ಓಪನ್ ಕ್ಯಾನೇಲ್ ಮಾಡಿದ್ದರೆ ೩೮೦ ಕೋಟಿ ರೂ.ಯಲ್ಲಿ ಆಗುತ್ತಿತ್ತು ಅದನ್ನು ೧೦೮೦ ಕೋಟಿ ರೂ. ಪೈಪಲೈನ್ ಮುಖಾಂತರ ನೀರು ಕೊಡುವಂತಹ ಕೆಲಸ ಮಾಡಿದ್ದಾರೆ ಸದ್ಯಕ್ಕೆ ಈ ಯೋಜನೆಗೆ ೨.೫೬ ಟಿಎಂಸಿ ಮಿಸಲಿಡಲಾಗಿದೆ ರೈತರು ನಾನು ರಾಜಕಾರಣ ಮಾಡುತ್ತೇನೆಂದು ತಿಳಿಯಬೇಡಿ ನಿಮಗೆ ನೀರು ಸರಿಯಾಗಿ ಬರಬೇಕೆಂದರೆ ಗಟ್ಟಿಯಾಗಿ ನಿಂತು ದ್ವನಿ ಎತ್ತಿ ಅಂದಾಗ ನಿಮ್ಮ ಹೊಲಗಳಿಗೆ ನೀರು ಬರುತ್ತವೆ ಎಂದರು.
ಈ ಸಮಯದಲ್ಲಿ ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಬಿಜೆಪಿ ಮಂಡಲ ಅಧ್ಯಕ್ಷ ಪಂಪಣ್ಣವರ, ಸೋಮನಗೌಡ, ಕವಡಿಮಟ್ಟಿ, ಸಂಗಮ್ಮ ದೇವರಳ್ಳಿ, ಮೊದಲಾದವರು ಇದ್ದರು.