ಸಂಗನಬಸವ ಅಂತರಾಷ್ಟೀಯ ವಸತಿ ಶಾಲೆ, ಪ. ಪೂ. ಕಾಲೇಜನಲ್ಲಿ ಯೋಗದಿನ ಆಚರಣೆ

ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನದಂದು “ಒಂದು ಭೂಮಿಗೆ, ಒಂದು ಆರೋಗ್ಯಕ್ಕೆ ಯೋಗ” ಎಂಬ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಂಗವಾದ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ & ಪ. ಪೂ. ಕಾಲೇಜು, ಕವಲಗಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿ ಮುತ್ತಪ್ಪ ಹೆಚ್. ಸೃಷ್ಟಿ ಬ. ರವರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಪ್ರೊಫೆಸರ್ ಹೇಮಂತ್ ಕೃಷ್ಣ ಯೋಗದ ಮತ್ತು ಸಂಗೀತದ ವಿಷೇಷತೆಯನ್ನು ವಿವರಿಸಿ ಎರಡೂ ಸಹ ಮನುಷ್ಯನ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಸಹಾಯಕಾರಿಯಂದು ನುಡಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶರ್ಮಿಳಾ ಹೇಮಂತ್ ರವರು ಅಧ್ಯಕ್ಷತೆ ವಹಿಸಿ ದಿನ ನಿತ್ಯ ಯೋಗದ ಮುಖಾಂತರ ದೈಹಿಕವಾಗಿ ಸದೃಢೃಾಗಿರಿಯಂದು ಕಿವಿಮಾತು ನುಡಿದರು.
ಯೋಗ ತರಬೇತುದಾರ ಮಲ್ಲಿಕರ್ಜುನ ಬ. ಮಕ್ಕಳಿಗೆ ಯೋಗ ಅಭ್ಯಾಸ ಮಾಡಿಸಿದರು, ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಕಿರಣ ಮುಲ್ಲುರ ಅವರು ಪ್ರತಿಜ್ಞೆ ಗೈದರು. ಕುಮಾರ ರಿತಿಕ್ ಸಾಲಿ ಕಾರ್ಯಕ್ರಮ ನಿರೂಪಿಸಿದರು, ಕುಮಾರ ಹರ್ಷವರ್ದನ್ ಓಡೆಯರ ಸ್ವಾಗತಿಸಿದರು, ಕುಮಾರಿ ಸಮೃದ್ಧಿ ಮದರಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ & ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.