ಬೂದಿಹಾಳ ಪೀರಾಪೂರ ಏತ ನೀರಾವರಿ ಹೋರಾಟಕ್ಕೆ ಸಂಸದ ರಮೇಶ ಜಿಗಜಿಣಗಿ ಬೆಂಬಲ

Jul 14, 2025 - 09:24
 0
ಬೂದಿಹಾಳ ಪೀರಾಪೂರ ಏತ ನೀರಾವರಿ ಹೋರಾಟಕ್ಕೆ ಸಂಸದ ರಮೇಶ ಜಿಗಜಿಣಗಿ  ಬೆಂಬಲ
ಬೂದಿಹಾಳ-ಫೀರಾಪೂರ ಏತ ನೀರಾವರಿ ಮುಂದುವರೆದ ಕಾಮಗಾರಿಯನ್ನು ಪ್ರಾರಂಬಿಸಬೇಕೆAದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತಾಪಿ ಜನರು ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೆಟ್ಟಿ ನೀಡಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಹಿಂದಿನ ನಮ್ಮ ಬಿಜೆಪಿ ಸರ್ಕಾರವು ಎರಡು ಹಂತದಲ್ಲಿ ಒಮ್ಮೆ ೭೯೬ ಕೋಟಿ ಮತ್ತು ೮೦೦ ಕೋಟಿ ಹಣವನ್ನು ನೀಡಿ ಶೇ. ೯೦ ರಷ್ಟು ಕಾಮಗಾರಿಯು ೨ ವರ್ಷದ ಹಿಂದೆಯೇ ಮುಕ್ತಾಯಗೊಳಿಸಿದೆ ಆದರೆ ಈಗೀನ ನರ ಸತ್ತ ಕಾಂಗ್ರೇಸ್ ಸರ್ಕಾರ ಕೊನೆಯ ಹಂತದ ಕಾಮಗಾರಿಗೆ ಅವಶ್ಯವಿರುವ ೧೭೦ ಕೋಟಿ ರೂ. ನೀಡಲು ಮೀನ ಮೇಷ ಏಣಿಸುತ್ತಿದೆ ಕೂಡಲೇ ಎಫ್‌ಐಸಿ ಕಾಲುವೆ ನಿರ್ಮಾಣಕ್ಕೆ ಹಣ ನೀಡಿ ಕಾಮಗಾರಿ ಪ್ರಾರಂಭಿಸಬೇಕೆAದು ಮಾಜಿ ಕೇಂದ್ರ ಸಚಿವ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದರು.
          ರವಿವಾರರಂದು ತಾಲೂಕಿನ ಕೊಡಗಾನೂರ ಕ್ರಾಸ್‌ನಲ್ಲಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಸಂಬAಧಿಸಿದ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತಾಪಿ ಜನರು ನಡೆಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬೆಟ್ಟಿ ನೀಡಿ ಬೆಂಬಲ ಸೂಚಿಸಿ ಮಾತನಾಡುತ್ತಿದ್ದ ಅವರು ಗ್ಯಾರೆಂಟಿ ಹೆಸರಿನ ಮೇಲೆ ಈಗೀನ ಕಾಂಗ್ರೇಸ್ ಸರ್ಕಾರ ಲೋಟಿ ಮಾಡುವದರಲ್ಲಿಯೇ ಕಾಲ ಕಳೆಯುತ್ತಿದೆ ಈ ಮೊದಲು ಸುಸಿಕ್ಷೀತರಾಗಿದ್ದ ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಲೂಟಿಕೋರರ ಮುಖಂಡರAತೆ ಕೆಲಸ ಮಾಡುತ್ತಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದರು. ಬೂದಿಹಾಳ-ಫೀರಾಪೂರ ಯೋಜನೆ ಪೂರ್ಣಗೊಳ್ಳಲು ಕೇವಲ ೧೭೦ ಕೋಟಿ ರೂ. ಅಗತ್ಯವಿದೆ ಅದನ್ನು ಕೊಡಲು ಇವರಿಂದ ಆಗುತ್ತಿಲ್ಲಾ ಈಗೀನ ಕಾಂಗ್ರೇಸ್ ಸರ್ಕಾರಕ್ಕೆ ಮಾನವೀಯತೆ ಮನಷತ್ವವೆಂಬುದು ಇದ್ದರೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಅವರು ಈ ಹಿಂದೆ ಇಂಡಿಯಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ೨೫೦೦ ಕೋಟಿ ರೂ. ಹಣ ಮಿಸಲಿಟ್ಟು ಪೂಜೆ ಮಾಡಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇವೆ ಈಗ ಬಿಜೆಪಿ ಕೆಲಸಕ್ಕೆ ತಾವು ಮಾಡುತ್ತಿದ್ದೇವೆಂದು ಈಗ ಮತ್ತೇ ಪೂಜೆ ಮಾಡಲು ಬರುತ್ತಿದ್ದಾರೆ ಇದು ಎಂತಹ ದುರ್ದೈವ ಎಂಬುದು ಎಲ್ಲರೂ ನೋಡಬೇಕಾಗಿದೆ ಇಂಡಿ ತಾಲೂಕಿನಲ್ಲಿ ಕಾಲುವೆಗಳು ಒಡೆದು ಹೋಗಿರುವದನ್ನು ಮನಗಂಡು ಪ್ರಧಾನಿ ಮೋದಿಜಿ ಅವರಿಗೆ ಲೇಟರ್ ಕೊಟ್ಟು ಮನವಿ ಮಾಡಿದೆ ಅದಕ್ಕೆ ಪ್ರಧಾನಿಗಳು ಸಿಡಬ್ಲುಸಿ ಮಿಟಿಂಗ್ ಮಾಡಬೇಕಾದರೆ ಸುಮಾರು ೧೦ ಸಬ್ಜಕ್ಟರ್ ಬೇಕಾಗತ್ತದೆ ಅದು ಯಾವುದೂ ಇಲ್ಲದೇ ಇಂಡಿ ಮತಕ್ಷೇತ್ರದ ಕೇನಾಲ್ ದುರಸ್ಥಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರು ಹಣ ನೀಡಿದ್ದಾರೆಂದರು. 
          ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ನಾನು ಶಾಸಕನಿದ್ದಾಗ ೧೫೦೦ ಕೋಟಿ ರೂ. ಬೊಮ್ಮಾಯಿ ಸರ್‌ಗೆ ಮನವಿ ಮಾಡಿ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವಂತಹ ಕೆಲಸ ಮಾಡಿದ್ದೇನೆ ಆದರೆ ಈಗ ಕೆಲವರು ನಾನು ಮಾಡಿದ್ದು ಎಂದೂ ಹೇಳಲು ಹೊರಟಿರುವದು ನಾಚಿಕೆ ಗೇಡಿನ ಸಂಗತಿಯಾಗಿದೆ ಬಿಜೆಪಿ ಸರ್ಕಾರದಲ್ಲಿ ಹುಟ್ಟಿದ ಬೂದಿಹಾಳ-ಫೀರಾಪೂರ ಎಂಬ ಕೂಸಿಗೆ ತಮ್ಮ ಹೆಸರು ಇಡಲು ಹೊರಟಿದ್ದಾರೆ ಸದ್ಯ ಈ ಯೋಜನೆಗೆ ಕೇವಲ ೧೭೦ ಕೋಟಿ ರೂ. ಮಾತ್ರ ಬೇಕಿದೆ ಈ ಯೋಜನೆಗೆ ಪೂರ್ಣಗೊಂಡರೆ ೫೫ ಸಾವಿರ ಏಕರೆ ಜಮೀನು ಸಂಪೂರ್ಣ ನೀರಾವರಿಗೆ ಒಳಪಡಲಿದೆ ರೈತರ ಶಾಪ ಕಾಂಗ್ರೇಸ್ ಸರ್ಕಾರವನ್ನು ಸುಮ್ಮನೇ ಬಿಡುವದಿಲ್ಲಾ ಇದನ್ನು ರಾಜ್ಯ ಸರ್ಕಾರದ ಮಂತ್ರಿಗಳು ತಿಳಿದುಕೊಂಡು ಕೂಡಲೇ ಈ ಯೋಜನೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
           ಹೋರಾಟದ ನೇತೃತ್ವ ವಹಿಸಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಸಂಬAದಿಸಿ ಈಗಾಗಲೇ ೭೯೬ ಕೋಟಿ ಮತ್ತು ೮೦೦ ಕೋಟಿ ಸೇರಿ ೧೫೦೦ ಕೋಟಿಗೂ ಮೇಲ್ಪಟ್ಟು ಖರ್ಚು ಮಾಡಲಾಗಿದೆ ಮುಖ್ಯ ಪೈಪಲೈನ್‌ದಿಂದ ಹಿಡಿದು ಉಳಿದ ಎಲ್ಲ ಕಾಮಗಾರಿಯೂ ಮುಕ್ತಾಯಗೊಂಡಿದೆ ಆದರೆ ಕೊನೆಯ ಹಂತದ ಹೊಲ ಗಾಲುವೆ ಕಾಮಗಾರಿಯು ಇಷ್ಟೋತ್ತಿಗಾಗಲೇ ಪೂರ್ಣಗೊಂಡು ನೀರು ಹರಿಯಬೇಕಾಗಿತ್ತು ಆದರೆ ಈಗೀನ ಸರ್ಕಾರ ಗ್ಯಾರೆಂಟಿ ಹೆಸರಿನ ಮೇಲೆ ಹಣ ಲೂಟಿ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಸರ್ಕಾರದಲ್ಲಿ ಕೆಲಸ ಮಾಡುವ ಮಂತ್ರಿಗಳಿಗೆ ಇಚ್ಚಾಶಕ್ತಿ ಎಂಬುದು ಇರಬೇಕು ಅದು ಇರದಿದ್ದರೆ ಒಳ್ಳೆಯ ಕಾರ್ಯಗಳೆಲ್ಲವೂ ಅರ್ದಕ್ಕೆ ನಿಂತು ಹಾಳಾಗುತ್ತವೆ ಎಂಬುದು ಬೂದಿಹಾಳ-ಫೀರಾಪೂರ ನೀರಾವರಿ ಯೋಜನೆಯೇ ಸಾಕ್ಷೀಯಾಗಿದೆ ಕಾಂಗ್ರೇಸ್ ಕಸವೆಂಬುದು ಯಾವ ರೀತಿಯಾಗಿ ಕಿತ್ತೆಸೆಯೂತ್ತೇವೋ ಆ ರೀತಿ ಈ ಸರ್ಕಾರವನ್ನು ರೈತರೇ ಕಿತ್ತೇಸೆಯೂ ಸಂದರ್ಬ ಹತ್ತಿರ ಬರುತ್ತಿದೆ ಎಂದ ಅವರು ಈ ಯೋಜನೆಯು ಪೂರ್ಣಗೊಂಡರೆ ತಾಳಿಕೋಟೆ ತಾಲೂಕಿನ ೩೮ ಗ್ರಾಮಗಳ ರೈತರಿಗೆ ಅನೂಕೂಲವಾಗಲಿದೆ ಅಲ್ಲದೇ ತಾಲೂಕಿನ ೫೫ ಸಾವಿರ ಏಕರೆ ಪ್ರದೇಶ ನೀರಾವರಿಗೊಳಪಡಲಿದೆ ಇದಕ್ಕೆ ಸದ್ಯ ಅಗತ್ಯವಿರುವ ೧೭೦ ಕೋಟಿ ಅನುದಾನವನ್ನು ಸರ್ಕಾರವು ಸೀಘ್ರವೇ ಬಿಡುಗಡೆಗೊಳಿಸಿ ಮುಂದುವರೆದ ಕಾಮಗಾರಿಯನ್ನು ಪ್ರಾರಂಬಿಸಬೇಕೆAದು ಒತ್ತಾಯಿಸಿದರು.
       ಇನ್ನೋರ್ವ ನಿಕಟಪೂರ್ವ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕೊನೆಯ ಹಂತದ ಕಾಮಗಾರಿಯು ಈಗಾಗಲೇ ಮುಕ್ತಾಯಗೊಂಡು ನೀರು ಹರಿಯಬೇಕಾಗಿತ್ತು ಸರ್ಕಾರದ ನಿರ್ಲಕ್ಷದಿಂದ ಇಡೀ ಯೋಜನೆಯೇ ಹಳ್ಳ ಹಿಡಿಯುವ ಹಂತಕ್ಕೆ ಬರುತ್ತಿದೆ ಕೂಡಲೇ ಸರ್ಕಾರದ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆದ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
      ಈ ಸಮಯದಲ್ಲಿ ರೈತ ಮುಖಂಡರಾದ ಪ್ರಭುಗೌಡ ಬಿರಾದಾರ(ಅಸ್ಕಿ) ಸಂಗನಗೌಡ ಹೆಗರಡ್ಡಿ, ಸಿದ್ದು ಬುಳ್ಳಾ, ರಾಜುಸಾಹುಕಾರ ಇಬ್ರಾಹಿಂಪೂರ, ಸುಭಾಸ ಗುಂಡಕನಾಳ, ಸಿದ್ದನಗೌಡ ಕಾರಗನೂರ, ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮ ಒಳಗೊಂಡು ೩೮ ಗ್ರಾಮಗಳ ರೈತಾಪಿ ಜನರು ಪಾಲ್ಗೊಂಡಿದ್ದರು. 
----
ಈಗೀನ ಕಾಂಗ್ರೇಸ್ ಸರ್ಕಾರದಲ್ಲಿ ನೌಕರರಿಗೆ ಪಗಾರ ಕೊಡಲಿಕ್ಕೆ ಹಣ ಇಲ್ಲಾ ನನ್ನ ಬಳಿ ಸಾಕಷ್ಟು ಜನರು ರ‍್ತಾರೆ ೩ ಕೀಲೋ ಮೀಟರ್ ರೋಡ್ ಇದರೆ ಮಾಡಿ ಕೊಡ್ರಿ ಅಂತಾರೆ ಅವರಿಗೆ ಸಾಕಷ್ಟು ಭಾರಿ ಹೇಳಿನಿ ರಾಜ್ಯ ಸರ್ಕಾರದಾಗ ಯಾರೇ ಸತ್ರೂ ಅವರ ಸುಡಲಾಕ ಕಟಗಿಗೆ ರೋಕ್ಕಾ ಅವರ ಬಳಿ ಇಲ್ಲಾ ಅಂತ ಹೇಳಿನಿ ನನ್ನ ಕೈಲಾದಷ್ಟು ಕೆಲಸಗಳನ್ನು ನಾನು ಕೇಂದ್ರದ ಅನುದಾನದಲ್ಲಿ ಜನರಿಗೆ ಸ್ಪಂದನೆ ಮಾಡುವಂತಹ ಕೆಲಸವನ್ನು ಮಾಡುತ್ತಾ ಸಾಗಿದ್ದೇನೆ.
ರಮೇಶ ಜಿಗಜಿಣಗಿ
ಸಂಸದರು ವಿಜಯಪುರ
---

ಕಾಂಗ್ರೇಸ್‌ನವರು ಕ್ರೇಡಿಟ್‌ಗೆ ಬಡದಾಡುವದನ್ನು ನಿಲ್ಲಿಸಲಿ       
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಈಗಾಗಲೇ ೧೫೦೦ ಕೋಟಿ ರೂ. ಹಣವನ್ನು ನೀಡಿ ಮುಕ್ತಾಯ ಹಂತದವರೆಗೂ ಮಾಡಿದ್ದಾಗಿದೆ ಸದ್ಯ ಹೊಲಗಾಲುವೆಗೆ ೧೭೦ ಕೋಟಿ ರೂ. ಮಾತ್ರ ಅವಶ್ಯವಿದೆ ಆದರೆ ಕಾಂಗ್ರೇಸ್ ಸರ್ಕಾರ ಈ ಕೆಲಸ ಮಾಡಿದರೆ ಬಿಜೆಪಿಗೆ ಕ್ರೇಡಿಟ್ ಹೋಗುತ್ತದೆ ಎಂಬ ಕಾರಣಕ್ಕೆ ಮೀನ ಮೇಷ ಏಣಿಸುತ್ತಿರುವದು ಸರಿ ಅಲ್ಲಾವೆಂದ ಅವರು ಗ್ಯಾರೆಂಟಿ ಹೆಸರು ಹೇಳಿಕೊಂಡು ಕಾಲಹರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಬರವಸೆಯಂತೆ ಯಾವ ಗ್ಯಾರೆಂಟಿಯೂ ಜನರಿಗೆ ಮುಟ್ಟಿಸುವಲ್ಲಿ ಸಫಲತೆ ಹೊಂದಿಲ್ಲಾ ಕೇವಲ ಹೊಗಳಿಕೆಗೆ ಗ್ಯಾರೆಂಟಿಯಾಗಿದೆ ಮನೆಯಲ್ಲಿದ್ದ ಗ್ರಹಲಕ್ಷಿö್ಮÃಯರನ್ನು ಬೀದಿಯಲ್ಲಿ ನಿಲ್ಲಿಸುವಂತಹ ಕೆಲಸ ಕಾಂಗ್ರೇಸ್‌ನವರು ಮಾಡಿದ್ದಾರೆಂದು ಆರೋಪಿಸಿ ಅವರು ಬೂದಿಹಾಳ-ಫೀರಾಪೂರ ಯೋಜನೆ ಮುಗಿದು ಈಗಾಗಲೇ ೨ ವರ್ಷ ಕಳೆದಿದೆ ಆದರೆ ಈ ಕಾಮಗಾರಿ ಪೂರ್ಣಗೊಳಿಸಬೇಕಿರುವದು ಈಗೀನ ಸರ್ಕಾರದ ಮೇಲಿದೆ ಈ ಯೋಜನೆ ಪೂರ್ಣಗೊಳ್ಳದಿದ್ದರೆ ಸಂಪೂರ್ಣ ಖರ್ಚು ಮಾಡಿರುವ ೧೫೦೦ ಕೋಟಿ ರೂ. ಹಳ್ಳದಲ್ಲಿ ಹುಣಸೇಹಣ್ಣು ತೊಳೆದಂತಾಗಲಿದೆ ಅದಕ್ಕಾಗಿ ಇಂಡಿ ಪಟ್ಟಣಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ ಅವರು ಈ ಯೋಜನೆಗೆ ಹಣ ಬಿಡುಗಡೆಯ ಬಗ್ಗೆ ಘೋಷಣೆ ಮಾಡಿ ಹೋಗಬೇಕೆಂದು ಒತ್ತಾಯಿಸಿದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.