ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ : ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರö್ಯ ಹೋರಾಟಗಾರನ್ನು ಗೌರವಿಸುವ ಈ ದಿನವನ್ನು ಹೆಮ್ಮೆ, ಗೌರವ ಮತ್ತು ಆಚರಣೆಯಿಂದ ತುಂಬಿದ ದಿನವನ್ನು ಹಾರೈಸುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ನೂತನ ತಾಲೂಕಾಧ್ಯಕ್ಷ ವೈ ಸಿ ಮಯೂರ ಹೇಳಿದರು.
ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸಿಂದಗಿಯ ಕಾರ್ಯಾಲಯದಲ್ಲಿ ೭೯ನೆಯ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಈ ಸ್ವಾತಂತ್ರ‍್ಯ ದಿನಾಚರಣೆಯು ಕೃತಜ್ಞರಾಗಿರುವ ಮತ್ತು ಜವಾಬ್ದಾರಿಯುತ ನಾಗರಿಕರಾಗಿರಲು ಸೂಚಿಸುತ್ತದೆ. ನಮ್ಮ ಸ್ವಾತಂತ್ರ‍್ಯ ಅಮೂಲ್ಯವಾದುದು. ಅದನ್ನು ಸಂತೋಷ ಮತ್ತು ಕೃತಜ್ಞತೆಯಿಂದ ಆಚರಿಸೋಣ. ಹೋರಾಟಗಾರರ ಶೌರ್ಯಕ್ಕೆ ನಮನಗಳನ್ನು ಸಲ್ಲಿಸುತ್ತೇನೆ ಎಂದರು.
ಈ ವೇಳೆಯಲ್ಲಿ ನಿಕಟ ಪೂರ್ವ ಕಸಾಪ ಅಧ್ಯಕ್ಷ ಶಿವು ಬಡಾನೂರ, ಇನ್ನೋರ್ವ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ದೇವರೆಡ್ಡಿ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶಾಂತು ರಾಣಗೋಳ, ರಾಜು ನರಗೋದಿ, ಗುರುಶಾಂತ್ ಮಾಕೇರಿ, ಜೈ ಭೀಮ್ ತಳಕೇರಿ, ವರದಿಗಾರ ಮಹಾಂತೇಶ ನೂಲಾನವರ, ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಸೇರಿದಂತೆ ಇತರರು ಇದ್ದರು.