ಪುಣ್ಯಸ್ಮರಣೆ ಸಪ್ತಾಹಕ್ಕೆ ರೇವಣಸಿದ್ದೇಶ್ವರ ಶ್ರೀಗಳಿಂದ ಚಾಲನೆ : ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಹುತಾತ್ಮರ ೨೮ ನೇ ಪುಣ್ಯ ಸ್ಮರಣೋತ್ಸವ

Jul 15, 2025 - 20:42
 0
ಪುಣ್ಯಸ್ಮರಣೆ ಸಪ್ತಾಹಕ್ಕೆ ರೇವಣಸಿದ್ದೇಶ್ವರ ಶ್ರೀಗಳಿಂದ ಚಾಲನೆ : ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಹುತಾತ್ಮರ ೨೮ ನೇ ಪುಣ್ಯ ಸ್ಮರಣೋತ್ಸವ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಚಡಚಣ : ತಾಲೂಕಿನ ಭಾವೈಕ್ಯತೆಯ ತಾಣ ಶ್ರೀಕ್ಷೇತ್ರ ಇಂಚಗೇರಿ  ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜು. ೧೬ ರಿಂದ ೧೭ ರವರೆಗೆ ಎರಡು ದಿನಗಳ ಕಾಲ ಹುತಾತ್ಮರ ೨೮ ನೇಯ  ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.        

ಇಂದು ರಾತ್ರಿ ೯=೦೦ ಗಂಟೆಗೆ  ಶ್ರೀಮಠದ ಪೂಜ್ಯ ಶ್ರೀ  ಸಮರ್ಥ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಹುತಾತ್ಮರ ಗದ್ದುಗೆಯ ಹಾಗೂ ದಾಸಬೋಧ  ಪೂಜೆಯೊಂದಿಗೆ ಪುಣ್ಯಸ್ಮರಣೆ ಸಪ್ತಾಹಕ್ಕೆ ಚಾಲನೆ ನೀಡುವರು.             

ಇಂದು ಸಂಜೆ ಅಭಿಷೇಕ ವಿಶೇಷ ಪೂಜೆ ಪುರಾಣ-ಪ್ರವಚನ, ರಾತ್ರಿ ಜಾಗರಣೆ ನಿಮಿತ್ಯ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿ0ದ ಭಜನಾ ಕಾರ್ಯಕ್ರಮ ನಡೆಯಲಿದೆ.                     

ನಾಳೆ ಬೆಳಿಗ್ಗೆ ೧೧=೦೦ ಗಂಟೆಗೆ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಭಜನಾಪದ, ಪುರಾಣ-ಪ್ರವಚನ ಪೂಜ್ಯ  ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ  ಪುಷ್ಪವೃಷ್ಠಿಯೊಂದಿಗೆ ಹುತಾತ್ಮರ ಪುಣ್ಯ ಸ್ಮರಣೋತ್ಸವ ಮಂಗಲಗೊಳ್ಳಲಿದೆ ಎಂದು ಶ್ರೀಮಠದ ಪರಮ ಶಿಷ್ಯ ಭಾರತೇಶ ಹಾಸಿಲಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.