ಮಹಾಪುರುಷರ ಆದರ್ಶವನ್ನು ರೂಢಿಸಿಕೊಳ್ಳಿ

Oct 4, 2024 - 11:43
 0
ಮಹಾಪುರುಷರ ಆದರ್ಶವನ್ನು ರೂಢಿಸಿಕೊಳ್ಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಜಮಖಂಡಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ದೇಶದ ಎರಡನೇ ಪ್ರಧಾನಿ ಲಾಲ ಬಹದ್ದೂರ್ ಶಾಸ್ತ್ರೀಜಿ ಭಾರತದ ಎರಡು ರತ್ನಗಳು ಅವರ ಜೀವನದ ಆದರ್ಶವನ್ನು ಬಾಳಿನಲ್ಲಿ ಅಳವಡಿಸಿ ಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು. 

  ಅವರು ಕುಂಬಾರಹಳ್ಳ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧೀಜಿಯವರ ಸತ್ಯ, ನೀತಿ, ಪ್ರೀತಿ ಮತ್ತು ಶಾಸ್ತ್ರಿಜೀಯವರ ಪ್ರಾಮಾಣಿಕತೆಯನ್ನು ವಿದ್ಯಾರ್ಥಿ ಗಳು ಅಳವಡಿಸಿಕೊಂಡಾಗ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

     ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಿಕ್ಷಕ ಸಂಗನಬಸವ ಉಟಗಿ ಗಾಂಧೀಜಿಯವರು ಜೀವನದ ಅವಮಾನವನ್ನು ಸನ್ಮಾನವಾಗಿ ಸ್ವೀಕರಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ ಶಾಸ್ತ್ರೀಜಿಯವರು ಕಡು ಬಡತನದಲ್ಲಿ ಬೆಳೆದು ತಮ್ಮ ಪ್ರಾಮಾಣಿಕತೆ ಮತ್ತು ಧೈರ್ಯದ ಮೂಲಕ ಭಾರತದ ಕೀರ್ತಿಯನ್ನು ಪಸರಿಸಿದರು ಎಂದು ಹೇಳಿದರು.

        ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿ ಗಾಂಧೀಜಿಯವರಂತೆ ನಾವೂ ಸತ್ಯ, ಶಾಂತಿ ಮತ್ತು ಅಹಿಂಸೆಯ ಪಥದಲ್ಲಿ ಸಾಗಬೇಕು, ಶಾಸ್ತ್ರೀಜಿಯವರಂತೆ ಕಾಯಕ ನಿಷ್ಠೆ ದೇಶಪ್ರೇಮ, ಪ್ರಾಮಾಣಿಕರಾಗಿರಬೇಕು ಎಂದರು.

  ವಿದ್ಯಾರ್ಥಿಗಳಾದ ಲಕ್ಷ್ಮಣ ತೇರದಾಳ, ಚೇತನ ಸಾಲಗುಂದಿ, ವಿದ್ಯಾ ಹಿರೇ ಕುರುಬರ ಇನ್ನಿತರ ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಶಾಸ್ತ್ರ ಜಿ ಅವರ ಕುರಿತು ಮಾತನಾಡಿದರು.

      ಶಿಕ್ಷಕರಾದ ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ, ಚಂದ್ರಕಾಂತ ಪೋಲೀಸ್, ಶ್ರೀಮತಿ ಎ.ಎಂ.ಮೋಮಿನ್, ಎಸ್.ಎಸ್.ಬಿರಾದಾರ ಉಪಸ್ಥಿತರಿದ್ದರು.

         ಶ್ರೀಮತಿ ಶಾರದಾ ಮಠ ರವರು ಪ್ರಾಸ್ತಾವಿಕದೊಂದಿಗೆ ಎಲ್ಲರನ್ನೂ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

          ಗಾಂಧೀ ಜಯಂತಿಯ ಸಂದರ್ಭದಲ್ಲಿ ಶಾಲೆಯ ಸುತ್ತಮುತ್ತ ಶ್ರಮದಾನ ನಡೆಸಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಲಾಯಿತು.

           ಡಿ.ಸಿ.ಮೇಡಂರವರ ತಿಂಗಳ ಪತ್ರವನ್ನು ವಾಚಿಸಲಾಯಿತು. ಪ್ರತಿಭಾಕಾರಂಜಿ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಕ್ಕಳು ಮತ್ತು ಶಿಕ್ಷಕರು ಗಾಂಧಿ ಟೊಪ್ಪಿ ಧರಿಸಿ ಗಾಂಧೀ ನಡಿಗೆಯಲ್ಲಿ ಪಾಲ್ಗೊಂಡರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.