ಡಾ.ಅಂಬೇಡ್ಕರರನ್ನು ಹಗಲಿರುಳು ಸ್ಮರಿಸೋಣ : ಶ್ರೀಶೈಲ ಜಾಲವಾದಿ

Jan 27, 2025 - 23:30
 0
ಡಾ.ಅಂಬೇಡ್ಕರರನ್ನು ಹಗಲಿರುಳು ಸ್ಮರಿಸೋಣ :  ಶ್ರೀಶೈಲ ಜಾಲವಾದಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಾನೂನಾತ್ಮಕವಾಗಿ ನಡೆಸಿಕೊಂಡು ಹೋಗಲು ಹಗಲು ರಾತ್ರಿ ಎನ್ನದೆ ಭಾರತ ದೇಶದ ಅದ್ಭುತವಾದ ಭಾರತೀಯ ಸಂವಿಧಾನವನ್ನು ಬರೆದು ಕೊಟ್ಟಂತಹ ಮಹಾನ್ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹಗಲಿರುಳು ಸ್ಮರಿಸುವಂತ ಕಾರ್ಯಾವಾಗಬೇಕು ಎಂದು ಬಹುಜನ  ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ  ಶ್ರೀಶೈಲ ಜಾಲವಾದಿ ಅವರು ಹೇಳಿದರು.

ಗೋಲಗೇರಿ ಗ್ರಾಮದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಸಮರ್ಪಣ ದಿನ 76ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಜನಪ್ರತಿನಿಧಿಗಳು ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿರುತ್ತೀರಿ ಜನಪ್ರತಿನಿಧಿಗಳು ಬರೀ ಜನರ 
ಮಧ್ಯೆ ನಿಂತು ಭಾಷಣ ಮಾಡಿದರೆ ಸಾಲದು ಡಾಕ್ಟರ್ : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಹಾಗೆ ತಾರತಮ್ಯವಿಲ್ಲದೆ ಸಮಾನತೆಗೆ ಆದ್ಯತೆ ನೀಡಲು ಶ್ರಮಿಸಬೇಕು‌.

ದೇಶದ ಕಾನೂನು ಅರಿತುಕೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಾ ಎಲ್ಲರೂ ದೇಶಭಿಮಾನ ಮತ್ತು ಭಾರತ ದೇಶದ ಸಂವಿಧಾನಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು‌. ಜನಪ್ರತಿನಿಧಿಗಳಾದರೂ ಮೊದಲು ಸಾಮಾಜಿಕ. ಆರ್ಥಿಕ. ಶೈಕ್ಷಣಿಕ.ಪ್ರಗತಿಗೆ ಹೆಚ್ಚಿನ ಆದೆತೆ ನೀಡುವುದರ ಜೊತೆಗೆ ಅಭಿವೃದ್ಧಿಯತ್ತ ಸಾಗಿದರೆ ಮತ್ತು ಇದಕ್ಕೆ ಆದ್ಯತೆ ನೀಡಿದರೆ ಬಲಿಷ್ಠವಾಗಲು ಸಾಧ್ಯ ಎಂದರು.

ವಿಜುಗೌಡ ಬಿರಾದಾರ್, ನಿಂಗನಗೌಡ ಪಾಟೀಲ, ಮುತ್ತು ಸಾಹುಕಾರ್ ಸಾತಿಹಾಳ್. ನಿಂಗಣ್ಣ ಸಾಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಶಶಿಕಾಂತ್ ನಾಯ್ಕಲ್ ಪುಷ್ಪಾರ್ಚನೆ ಮಾಡಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ 26ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು  ಓಂ ಪ್ರಕಾಶ್ ಬಿರಾದಾರ, ಬಸವರಾಜ ಮಾರಲಬಾವಿ, ಮೋದಿನ್ ಶಾಬಾದಿ,ವಿಜುಗೌಡ ಬಿರಾದಾರ ನೆರವೇರಿಸಿದರು.


ಈ ಸಂದರ್ಭದಲ್ಲಿ ಶ್ರೀ ವಿಶ್ವರಾಧ್ಯ ಮಠ ಗ್ರಾ ಪಂ ಸದಸ್ಯರು ಗೋಲಗೇರಿ ಮತ್ತು ರಾಜು ಹತ್ತರಕಿ ಗ್ರಾ ಪಂ ಸದಸ್ಯರು ಗೋಲಗೇರಿ ಇವರು ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿದರು.

ಪಿಕೆಪಿಎಸ್ ಬ್ಯಾಂಕ್ ಸದಸ್ಯ ಗೊಲ್ಲಗೌಡ ಬಿರಾದಾರ,   ಮಾಬೂರಿ ಹಳಿಮನಿ, ಸಲೀಂ ಭಗವಾನ್ ಗ್ರಾಪಂ ಸದಸ್ಯರು ಗೋಲಗೇರಿ, ಮುತ್ತು ಸಾವ್ಕಾರ್ ಸಾತಿಹಾಳ, ನಿಂಗಣ್ಣ ಸಾಲಿ, ಡಿಕೆ ಚಲವಾದಿ, ಮೈಬೂಬ್ ನಾಗಾವಿ,  ಬಸವರಾಜ ತಳವಾರ, ಬಸಪ್ಪ ಪೂಜಾರಿ, ಡವಲು ಬನ್ನಟ್ಟಿ, ಪೀರಪ್ಪ ಜಾಲವಾದಿ, ನಿಂಗಣ್ಣ ಚಲವಾದಿ, ರವಿ ಚಲವಾದಿ, ಗೊಲ್ಲಾಳ ಮಣಗೇರಿ, ಗೊಲ್ಲಾಳ ಚಿಕ್ಕಸಿಂದಗಿ, ಶೀಪು ಗಡಗೇನವರ್, ಮಲ್ಲು ಕರ್ನಾಳ, ವಿರುಪಾಕ್ಷಿ ಗಣಪೂರ, ಹನುಮಂತ ಮಾದರ, ಈರಪ್ಪ ಚಲವಾದಿ, ಕುಮಾರ್ ಗೊಂದಳೆ,  ತಿಮ್ಮಣ್ಣ ಭಜಂತ್ರಿ ಸೇರಿದಂತೆ ಇನ್ನಿತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.