"ನಾ ನಿನ್ನ ಬಿಡಲಾರೆ GHOST -2.0" ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Jan 27, 2025 - 23:22
 0
"ನಾ ನಿನ್ನ ಬಿಡಲಾರೆ GHOST -2.0" ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ಹೇಮಂತ್ ಹೆಗ್ಡೆ ನಿರ್ದೇಶನದ ಬಹು ನಿರೀಕ್ಷಿತ  "ನಾ ನಿನ್ನ ಬಿಡಲಾರೆ ಘೋಸ್ಟ್ 2.0" ಹಾರಾರ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತಿಚೆಗಷ್ಟೇ ಸಕಲೇಶಪುರ ದ ಸುತ್ತ ಮುತ್ತ ಮುಕ್ತಾಯಗೊಂಡಿತು. ಸುಮಾರು ಹತ್ತು ದಿನಗಳ ಈ ಶೆಡ್ಯೂಲ್ ನಲ್ಲಿ ಅಪೂರ್ವ ಮತ್ತು ಹೇಮಂತ್ ಬಾಗವಹಿಸಿದ್ದ ಹಲವು ರೋಚಕ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ಇದಲ್ಲದೆ ಶಂಕರ್ ಅಶ್ವಥ್ ಹಾಗೂ ಸುಚೇಂದ್ರ ಪ್ರಸಾದ್ ಭಾಗವಹಿಸಿದ ಹಲವು ಸನ್ನಿವೇಶಗಳ ಚಿತ್ರೀಕರಣ ಸಹ ನಡೆಯಿತು.. 

ಹೇಮಂತ್ ಹೆಗ್ಡೆ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಪೂರ್ವ, ಕಿಶೋರ್, ಶರತ್ ಲೋಹಿತಾಶ್ವ , ಭಾವನ ನಾಜರ್ ಮುಂತಾದ ಕಲಾವಿದರ ದಂಡೇ ಇದೆ ..ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಗ್ರಾಫಿಕ್ಸ್ ಸಿಂಗಾಪುರದ ಸ್ಟುಡಿಯೋ ಒಂದರಲ್ಲಿ ತಯಾರಾಗಲಿದೆ.  ಚಿತ್ರದ ಮೂರನೇ ಹಂತದ ಚಿತ್ರೀಕರಣ ಫೆಬ್ರವರಿ ಯಲ್ಲಿ ಶುರುವಾಗಲಿದೆ. ಚಿತ್ರ ಜೂನ್ ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ ..

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.