ಶಭಾಷ್ ಬಡ್ಡಿಮಗ್ನೇ ಚಿತ್ರದ ರೋಮ್ಯಾಂಟಿಕ್ ಹಾಡು ಬಿಡುಗಡೆ

ಹೌದು, ಶಭಾಷ್ ಬಡ್ಡಿಮಗ್ನೇ ಚಿತ್ರ ತೆರೆಗೆ ಬರುತ್ತಿದ್ದು ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಕಾಮಿಡಿ ಜೊತೆಗೆ ರೋಮ್ಯಾಂಟಿಕ್ ನಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಹಾಗೂ ನಾಯಕಿ ಆದ್ಯಪ್ರಿಯ ಅಭಿನಯಿಸಿದ್ದು, ಮುದ್ದು ಮುದ್ದಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರ ತಂಡ ಫಸ್ಟ್ ಲುಕ್ ಪೋಸ್ಟರ್ಸ್ ಗಳಿಂದ ಸದ್ದು ಮಾಡುತ್ತಿದ್ದು .ಈಗ ನೀನಾಗಿ ನೀನು ಶುರು ಮಾಡು ಬಾ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರವನ್ನು ಬಿಎಸ್ ರಾಜಶೇಖರ್ ನಿರ್ದೇಶನ ಮಾಡಿದ್ದು, ಚೈತ್ರ ಪ್ರಕಾಶ್ ರವರು ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಸಿದ್ಧಿ ಸಂಗೀತ ನಿರ್ದೇಶನ , ಅಣಜಿ ನಾಗರಾಜ್ ಛಾಯಾಗ್ರಹ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ್ ನೃತ್ಯ ಸಂಯೋಜನೆ ಹಾಗೂ ಚಿನ್ನಯ್ಯ ರವರು ಫೈಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಚಿತ್ರದಲ್ಲಿ ಬಹುತಾರಗಳ ಹೊಂದಿದ್ದು ಪ್ರಕಾಶ್ ತುಂಬಿನಾಡು, ಮಿತ್ರ ,ಸಾಮ್ರಾಟ್ ಶೆಟ್ಟಿ, ಕಾವ್ಯ ರಮೇಶ್ ,ಶಂಕರ್ ಅಶ್ವಥ್, ರವಿತೇಜ ಇನ್ನು ಹಲವಾರು ಕಲಾವಿದರು ಬಯಸಿದ್ದಾರೆ .ಈ ಚಿತ್ರದಲ್ಲಿ ಚಿತ್ರ ಸಾಹಿತ್ಯ ಭಾಗದಲ್ಲಿ ಪ್ರಮೋದ್ ಮರವಂತೆ ಹಾಗೂ ಕೆ ಕಲ್ಯಾಣ್ ರವರು ಬರೆದಿದ್ದಾರೆ. ಚಿತ್ರದ ಪ್ರಮೋಷನ್ ಕಾರ್ಯಗಳು ವೇಗವಾಗಿ ನಡೆಯುತ್ತಿದ್ದು ಚಿತ್ರ ಇದೆ ಫೆಬ್ರವರಿ 28ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗಿದೆ.