ಅಭ್ಯುದಯ ಪಿಯು ಸೈನ್ಸ್ ಕಾಲೇಜಿನಲ್ಲಿ ಫೆ.2 ರಂದು ಹೋಳ್ಕರ್ ಸ್ಕಾಲರ್ಶಿಪ್ ಎಕ್ಸಾಂ

ಮುದ್ದೇಬಿಹಾಳ : ಪಟ್ಟಣದ ವಿದ್ಯಾನಗರದ ಹೋಳ್ಕರ್ ಕಾಲೋನಿಯಲ್ಲಿರುವ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನಲ್ಲಿ ಫೆ.2 ರಂದು ಬೆಳಗ್ಗೆ 11ಕ್ಕೆ ಹೋಳ್ಕರ್ ಸ್ಕಾಲರ್ಶಿಪ್ ಎಕ್ಸಾಂ ಆಯೋಜಿಸಲಾಗಿದ್ದು ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೊದಲ 20 ವಿದ್ಯಾರ್ಥಿಗಳಿಗೆ ಎರಡು ವರ್ಷದ ಉಚಿತ ಶಿಕ್ಷಣ ನೀಡುವುದಾಗಿ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು , ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಇರುವುದಿಲ್ಲ. ಪ್ರಥಮ ಬಹುಮಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 65 ಸಾವಿರ ರೂ.ಸ್ಕಾಲರ್ಶಿಪ್(10 ಸಾವಿರ ರೂ.ನಗದು),ದ್ವಿತೀಯ ಬಹುಮಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 62 ಸಾವಿರ ರೂ.ಸ್ಕಾಲರ್ಶಿಪ್(ಏಳು ಸಾವಿರ ರೂ.ನಗದು), ಮೂರನೇ ಸ್ಥಾನ ಪಡೆಯುವ ವಿದ್ಯಾರ್ಥಿಗೆ 60 ಸಾವಿರ ರೂ.ಸ್ಕಾಲರ್ಶಿಪ್(ಐದು ಸಾವಿರ ರೂ.ನಗದು), ನಾಲ್ಕನೇ ಬಹುಮಾನ ಪಡೆಯುವ ವಿದ್ಯಾರ್ಥಿಗೆ 58 ಸಾವಿರ ರೂ.ಸ್ಕಾಲರ್ಶಿಪ್(ಮೂರು ಸಾವಿರ ರೂ.), ಐದನೇ ಬಹುಮಾನ ಪಡೆಯುವ ವಿದ್ಯಾರ್ಥಿಗೆ 57 ಸಾವಿರ ರೂ. ಸ್ಕಾಲರ್ಶಿಪ್(ಎರಡು ಸಾವಿರ ರೂ.ನಗದು) ಬಹುಮಾನ ನೀಡಲಾಗುತ್ತದೆ.ಪರೀಕ್ಷೆ ಬರೆಯಲು ಮೊ.9901847211, 9686264710 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಕಿರಣ ಮದರಿ, ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಪ್ರಾಚಾರ್ಯ ಎಂ.ಎ.ಧನ್ನೂರ ಇದ್ದರು.